ಚಿಕ್ಕಹಳ್ಳಿ ಗ್ರಾಮದ ದೊಡ್ಡ ಆಲದಮರದಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್.ರಮೇಶ್ ಹಾಗೂ ಫೈರೋಜ್‌ಖಾನ್ ಅವರನ್ನು ಸನ್ಮಾನಿಸಲಾಯಿತು. 
ಜಿಲ್ಲೆ

ಗುರು-ಹಿರಿಯರ ಮಾರ್ಗದರ್ಶನದಲ್ಲಿ ಶಿಷ್ಯರು ಮುನ್ನಡೆಯಲಿ

ಯಳಂದೂರು: ಪ್ರಸ್ತುತ ಸಮಾಜದಲ್ಲಿ ಗುರುಶಿಷ್ಯರ ಸಂಬಂಧ ಕ್ಷೀಣಿಸುತ್ತಿರುವುದು ಸಮಾಜದ ಸ್ವಾಸ್ಥ್ಯ ಕೆಡಲು ಕಾರಣವಾಗಿದೆ. ಆದ್ದರಿಂದ ಶಿಷ್ಯರು ಗುರು-ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯುವ ಅಗತ್ಯವಿದೆ ಎಂದು ಸಮಾಜ ಸೇವಕ ವಡಗೆರೆ ಕುಮಾರ್ ತಿಳಿಸಿದರು.

ಭಾವನ ಮಿತ್ರಕೂಟ ವತಿಯಿಂದ ಚಿಕ್ಕಹಳ್ಳಿ ಗ್ರಾಮದ ದೊಡ್ಡ ಆಲದಮರದಡಿ ಇತ್ತೀಚೆಗೆ ಆಯೋಜಿಸಿದ್ದ ಗುರುವಂದನ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ ಗುರುವಿಗೆ ತನ್ನದೇ ಆದ ಗೌರವವಿದೆ. ಅದನ್ನು ಇಂದಿನ ಶಿಷ್ಯವೃಂದ ಉಳಿಸಿ ಬೆಳೆಸಿಕೊಂಡು ಹೋಗಬೇಕಾದ ಅಗತ್ಯತೆ ಇದೆ. ಗುರುಹಿರಿಯರ ಮಾರ್ಗದರ್ಶನದಿಂದ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡಾಗ ಸಂಸ್ಕಾರಯುತ ಜೀವನ ನಡೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯೋಗಪಟು ಯತೀಶ್ ಮಾತನಾಡಿ, ಯಾವುದೇ ವ್ಯಕ್ತಿ ಎಷ್ಟೇ ಎತ್ತರಕ್ಕೆ ಬೆಳೆದಿದ್ದರೂ ಅದಕ್ಕೆ ಕಾರಣ ಗುರುಗಳ ಮಾರ್ಗದರ್ಶನ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಉಪನ್ಯಾಸಕ ಮಧುವಿನಹಳ್ಳಿ ಎಸ್.ರಮೇಶ್, ಶಿಕ್ಷಣ ಸಂಸ್ಥೆಗಳು ಪಾಠದೊಂದಿಗೆ ಮೌಲ್ಯಾಧಾರಿತ ಶಿಕ್ಷಣ ಬೋಧಿಸುವುದು ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು.

ಲೇಖಕ ಫೈರೋಜ್‌ಖಾನ್ ಅವರನ್ನು ಸನ್ಮಾನಿಸಲಾಯಿತು. ಇನ್ಫೋಸಿಸ್ ಉದ್ಯೋಗಿ ನಾಗರಾಜ್, ಭಾಸ್ಕರ್, ಶಾಮಿಯಾನ ಶ್ರೀನಿವಾಸ್, ಅನಂತ ಪದ್ಮನಾಭರಾವ್, ಗಾಯತ್ರಿ ನಂದೀಶ್, ಅಶ್ವಿನಿ ಭಾನುಪ್ರಕಾಶ್, ಶಿಲ್ಪಾ ರಂಗನಾಥ್, ಲಕ್ಷ್ಮೀ ಶ್ರೀನಿವಾಸ್, ರೂಪಾ, ರೂಪಶ್ರೀ, ನಾಗರಾಜ್, ಉಷಾ, ಭಾಸ್ಕರನ್, ಜಬೀನ್‌ತಾಜ್, ಫೈರೋಜ್‌ಖಾನ್, ಲೀಲಾವತಿ, ವೈ.ಸಿ.ಮಹದೇವಸ್ವಾಮಿ, ಮೂಕಹಳ್ಳಿ ಕುಮಾರಸ್ವಾಮಿ, ವೀಣಾಯತೀಶ್, ಸವಿತಾ ಮಹದೇವಕುಮಾರ್, ವರ್ಧಿನಿ ವಿನಯ್ ಇತರರು ಹಾಜರಿದ್ದರು.