ಜಿಲ್ಲೆ

ಗುರು, ಭಕ್ತರ ಸೇವೆಯಿಂದ ಸಮೃದ್ದಿ ಸಮಾಜ


ಚಿತ್ತಾಪುರ: ಗುರು ಮತ್ತು ಭಕ್ತರ ನಿಸ್ವಾರ್ಥ ಸೇವೆಯಿಂದ ಸಮೃದ್ಧಿ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಚಿತ್ತಾಪುರ ಕಂಬಳೇಶ್ವರ ಮಠದ ಪೀಠಾಧಿಪತಿ ಶ್ರೀ ಸೋಮಶೇಖರ ಶಿವಾಚಾರ್ಯರು ನುಡಿದರು.
ದಿಗ್ಗಾಂವದ ಕಂಚಗಾರಹಳ್ಳ ಮಠದ ಪಾರ್ವತಿ ಮತ್ತು ಪರಮೇಶ್ವರ ಕಲ್ಯಾಣ ಧಾಮದಲ್ಲಿ ಶ್ರೀ ಗುರುಲಿಂಗೇಶ್ವರ 16ನೇ ಪುಣ್ಯಸ್ಮರಣೆ, ಶ್ರೀ ಶರಣಬಸವೇಶ್ವರ ಪುರಾಣ ಮಂಗಲೋತ್ಸವ ಹಾಗೂ ಧಾರ್ಮಿಕ ಮಹಾಸಭೆಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸಮಾಜದಲ್ಲಿನ ಮೂಢನಂಬಿಕೆ ಹೋಗಲಾಡಿಸುವ ಕಾರ್ಯ ನಡೆಯಬೇಕಿದೆ. ಶರಣರ, ಸಂತರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಂಚಗಾರಹಳ್ಳದ ಶ್ರೀ ಮಲ್ಲಯ್ಯಸ್ವಾಮಿ ಸ್ಥಾವರಮಠ ನೇತೃತ್ವ ವಹಿಸಿದ್ದರು. ಹಲಕರ್ಟಿಯ ಶ್ರೀ ಮುನೀಂದ್ರ ಶಿವಾಚಾರ್ಯರು, ಪಾಳಾದ ಶ್ರೀ ಡಾ. ಗುರುಮೂರ್ತಿ ಶಿವಾಚಾರ್ಯರು, ದಂಡಗುಂಡದ ಶ್ರೀ ಸಂಗನಬಸವ ಶಿವಾಚಾರ್ಯರು, ಮಾಗಣಗೇರಿಯ ಶ್ರೀ ವಿಶ್ವರಾಧ್ಯ ಶಿವಾಚಾರ್ಯರು, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಎನ್ಈಕೆಆರ್ಟಿಸಿ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ, ಜಿಪಂ ಸದಸ್ಯ ಶಿವರುದ್ರ ಭೀಣಿ, ತಾಪಂ ಅಧ್ಯಕ್ಷ ಜಗಣ್ಣಗೌಡ ರಾಮತೀರ್ಥ ಮಾತನಾಡಿದರು.
ಕಲಾವಿದರಾದ ಶಾಂತಕುಮಾರ ಹೊನ್ನಕಿರಣಗಿ, ಶಾಂತಲಿಂಗ, ಷಣ್ಮುಖಯ್ಯ ಸ್ವಾಮಿ ಮುತ್ತಗಿ ಸಂಗೀತ ಸೇವೆ ಸಲ್ಲಿಸಿದರು. ಪ್ರಮುಖರಾದ ಚಂದ್ರಶೇಖರ ಕಾಶಿ, ಭೀಮಣ್ಣ ಹೋತಿನಮಡಿ, ಸಿದ್ದಣ್ಣಗೌಡ ಮಾಲಿ ಪಾಟೀಲ್, ಶರಣು ಸಜ್ಜನಶೆಟ್ಟಿ, ಮಲ್ಲಿನಾಥ ಭಾಗೋಡಿ, ಸಿದ್ದಣ್ಣಗೌಡ ದಳಪತಿ, ರಾಜಶೇಖರ ಪುರಾಣಿಕ, ನಾಗರಾಜ ಪಾಟೀಲ್, ಶ್ರೀಮಂತ ಗುತ್ತೇದಾರ್, ಜಗದೇವಪ್ಪ ಸಂಗಾವಿ, ಮಲ್ಲಿಕಾರ್ಜುನ ದುಪ್ಪಲಿ, ತಿಪ್ಪಣ್ಣ ಸಂಗಾವಿ, ಮಲ್ಲಶೆಟ್ಟೆಪ್ಪ ಸಂಗಾವಿ, ಭೀಮರಾವ ಹಡಪದ, ಚನ್ನವೀರ ಕಣವಿ ಇದ್ದರು.
ಶರಣಯ್ಯಸ್ವಾಮಿ ಸ್ಥಾವರಮಠ ಸ್ವಾಗತಿಸಿದರು. ಕಾಶೀನಾಥ ಗುತ್ತೇದಾರ್ ನಿರೂಪಣೆ ಮಾಡಿದರು.