ಜಿಲ್ಲೆ

ಗುರಿಯಿಟ್ಟು ಓದಿದರೆ ಯಶಸ್ಸು ಸಾಧ್ಯ : ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಅಭಿಮತ

ತುಮಕೂರು: ಹುಟ್ಟು ಮತ್ತು ಸಾವಿನ ಮಧ್ಯೆ ಇರುವ ಬದುಕು ಯಶಸ್ವಿಯಾಗಬೇಕು, ಯಾವ ೇತ್ರವೇ ಆಗಲಿ ಅದನ್ನು ಇಷ್ಟಪಟ್ಟು ಪರಿಶ್ರಮದಿಂದ ಗುರಿಯನ್ನಿಟ್ಟುಕೊಂಡು ಅಭ್ಯಾಸ ಮಾಡಿದರೆ ಯಶಸ್ಸು ಸಾಧ್ಯ ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕಸಾಪ ವತಿಯಿಂದ ಸೋಮವಾರ ಆಯೋಜಿಸಿದ್ದ ಐಎಎಸ್​ ತೇರ್ಗಡೆಯಾದ ಸಾಧಕರು ಹಾಗೂ ಎಸ್ಸೆಸ್ಸೆಲ್ಸಿ ಕನ್ನಡ ಭಾಷಾ ವಿಷಯದಲ್ಲಿ ಪೂರ್ಣಾಂಕ ಪಡೆದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು. ಗ್ರಾಮೀಣ ಭಾಗದ ಇಬ್ಬರು ಯುವತಿಯರು ಐಎಎಸ್​ ತೇರ್ಗಡೆಯಾಗಿದ್ದಾರೆ, ಉಳಿದೆಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ. ಎಲ್ಲರಿಗೂ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸುಗಳಿಸಲು ಸಾಧ್ಯವಿದ್ದು ಪ್ರಯತ್ನ ಬೇಕಷ್ಟೇ ಎಂದರು.

1970ಕ್ಕಿಂತ ಪೂರ್ವದಲ್ಲಿ ಭಾರತೀಯ ಆಡಳಿತ ಸೇವೆಯಲ್ಲಿ ಮಹಿಳೆಯರೇ ಇರಲಿಲ್ಲ, ಪ್ರಸ್ತುತ ಶೇ.18 ಈ ಸೇವೆಗೆ ಬಂದಿದ್ದಾರೆ. ಮಹಿಳೆಯರು ನಾಗರೀಕ ಸೇವೆಗೆ ಹೆಚ್ಚಾಗಿ ಬಂದರೆ ಬದಲಾವಣೆ ಸಾಧ್ಯ ಅವರ ಸಾಮಾಜಿಕ ದೃಷ್ಟಿಕೋನ ಪುರುಷರಿಗಿಂತ ಭಿನ್ನವಾಗಿರುತ್ತದೆ ಎಂದರು.

ಮನೆಯಲ್ಲಿ ಹೆಣ್ಣುಮಕ್ಕಳಿದ್ದರೆ ಅವಳನ್ನು ಮದುವೆ ಮಾಡಿಕೊಟ್ಟರೆ ತಮ್ಮ ಕರ್ತವ್ಯ ಮುಗಿಯಿತು ಎಂದು ಪಾಲಕರು ಭಾವಿಸಬಾರದು. ಅವಳಿಗೆ ಉತ್ತಮ ಶಿಕ್ಷಣ ನೀಡಬೇಕು, ಅವಳ ವಿವಾಹವನ್ನು ಮುಂದೂಡಿ ಅವಳಿಗೆ ಸ್ವಯಂ ಗಳಿಸುವ ಸಾಮರ್ಥ್ಯವನ್ನು ಕಲಿಸಿದರೆ ಸಮಾಜದ ಅನೇಕ ಸಮಸ್ಯೆಗಳು ನಿವಾರಣೆಯಾಗಲಿವೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಇತ್ತೀಚೆಗೆ ಯುಪಿಎಸ್​ಸಿ ಪರೀೆಯಲ್ಲಿ ತೇರ್ಗಡೆಯಾದ ಅರುಣಾ, ಐಎಎಸ್​ ಮುಖ್ಯ ಪರೀೆಯ 1750 ಅಂಕಗಳಿಗೆ 500 ಅಂಕಗಳಿಗೆ ಕನ್ನಡ ಭಾಷಾ ಸಾಹಿತ್ಯ ವಿಷಯ ತೆಗೆದುಕೊಂಡು ಬರೆದಿದ್ದೆ. ಕನ್ನಡ ಸಾಹಿತ್ಯವೇ ನನ್ನ ಸಾಧನೆಗೆ ಕಾರಣ. ಪರೀಕ್ಷೆ ಯಶಸ್ವಿಯಾಗಲು ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೂ ಸಾಧ್ಯವಿದೆ, ಸಣ್ಣಪುಟ್ಟ ಸಮಸ್ಯೆಗಳಿಗೆ ಗಮನ ಕೊಡಬಾರದು ಎಂದರು.

ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ನಗರದ ಕಾಲೇಜುಗಳಿಗೆ ಬಂದಾಗ ಕೀಳರಿಮೆಗೆ ಅವಕಾಶ ನೀಡದೆ ಸತತ ಅಭ್ಯಾಸದಿಂದ ಗುರಿ ಸಾಧನೆಗೆ ಶ್ರಮಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್​ ಹೇಳಿದರು.

ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಪೂರ್ಣಾಂಕ ಪಡೆದ ತುಮಕೂರು ತಾಲೂಕಿನ 106 ವಿದ್ಯಾರ್ಥಿಗಳಿಗೆ ಪ್ರಶಂಸಾಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶೇ.100 ಫಲಿತಾಂಶ ಪಡೆದ 35 ಶಾಲೆಗಳ ಮುಖ್ಯಸ್ಥರನ್ನು ಗೌರವಿಸಲಾಯಿತು.

ಕಸಾಪ ಕಾರ್ಯದರ್ಶಿ ಡಾ.ಡಿ.ಎನ್​.ಯೋಗೀಶ್ವರಪ್ಪ, ಸಂಚಾಲಕ ಯೋಗಾನಂದ, ಕಾರ್ಯದರ್ಶಿ ಸಣ್ಣಹೊನ್ನಯ್ಯ ಕಂಟಲಗೆರೆ ಮತ್ತಿತರರು ಇದ್ದರು.

ಸ್ವಯಂಶಿಸ್ತು ಇರಲಿ: ನನ್ನ ವಿದ್ಯಾಭ್ಯಾಸ ಸರ್ಕಾರಿ ಶಾಲೆಗಳಲ್ಲಿಯೇ ಪೂರ್ಣವಾಗಿದೆ, ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವಯಂಶಿಸ್ತನ್ನು ಹಾಕಿಕೊಳ್ಳಬೇಕು. ಇದರ ಜತೆಗೆ ಪರಿಶ್ರಮ, ತಾಳ್ಮೆಯಂತಹ ಗುಣಗಳಿರಬೇಕು. ಪರೀಕ್ಷೆಯಲ್ಲಿ ತಾಳ್ಮೆಯಿಂದ ಯೋಚಿಸಿ ಉತ್ತರ ಬರೆಯಬೇಕು, ಪೋಷಕರು ಲಕ್ಷಿ$್ಮಯನ್ನು ಆರಾಧಿಸುವುದನ್ನು ಬಿಟ್ಟು ಶಾರದೆಯನ್ನು ನಂಬಬೇಕು ಎಲ್ಲವೂ ಸಿಗಲಿದೆ ಎಂದು ಸನ್ಮಾನ ಸ್ವೀಕರಿಸಿದ ಯುಪಿಎಸ್​ಸಿ ಸಾಧಕಿ ಕಲ್ಪಶ್ರೀ ಅಭಿಪ್ರಾಯ ಹಂಚಿಕೊಂಡರು.