ಕೊಳವಿ: ಸತತ ಪ್ರಯತ್ನ, ದಢ ಸಂಕಲ್ಪ ಮತ್ತು ನಂಬಿಕೆ, ಆತ್ಮವಿಶ್ವಾಸದಿಂದ ಗುರಿ ಮುಟ್ಟಬಹುದು ಎಂದು ಗೋಕಾಕ ಪದವಿ ಪೂರ್ವ ಮಹಾವಿದ್ಯಾಲಯ ಶಿಕ್ಷಕ ಬಿ.ಎಸ್. ಜೋಲಾಪೂರ ಹೇಳಿದರು. ಸಮೀಪದ ಮಮದಾಪೂರ ಗ್ರಾಮದ ಚರಮೂರ್ತೀಶ್ವರ ಮಠದ ಆವರಣದಲ್ಲಿ ರಸಸವೀ ಫೌಂಡೇಷನ್ ಅಡಿಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಪಾಕ್ಷಿಕ ಜ್ಞಾನಾಕ್ಷಯ ಚಿಂತಕರ ಚಾವಡಿ 32ನೇ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಂಕರ ಮುರಗೋಡ ಮಾತನಾಡಿ, ವಿದ್ಯಾರ್ಥಿಗಳು ಗುರಿ ಇರಿಸಿಕೊಂಡು ಸಾಧನೆ ಮಾಡಿ ಎಂದರು. ಸ್ಥಳೀಯ ಮಠದ ಚರಮೂರ್ತೀಶ್ವರ ಶ್ರೀ ಸಾನ್ನಿಧ್ಯ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಮಹಾಂತೇಶ ಜನ್ಮಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಶಿವನಗೌಡ ಕಮತ, ಅನ್ನಪೂರ್ಣೇಶ್ವರಿ ಮುರಗೋಡ, ಸಂಚಾಲಕ ದೇಮಶೆಟ್ಟಿ, ಶಿವಾನಂದ ಸುಣಧೋಳಿ, ಸದಾಶವ ಸೊಂಡೂರ, ಈಶ್ವರ ಜನ್ಮಟ್ಟಿ, ಈರಪ್ಪ ಸೊಂಡೂರ ಇತರರು ಇದ್ದರು.