ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದ ಆಶೀರ್ವಾದ ಭವನದಲ್ಲಿ ರಾಜ್ಯಮಟ್ಟದ ಪ್ರಗ್ಯಾನ ವಿಜ್ಞಾನ ಪ್ರದರ್ಶನವನ್ನು ಬೆಳಗಾವಿ ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಪ್ರವೀಣ ಬಾಗೇವಾಡಿ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು. ಡಾ. ರವಿರಾಜ ಕುಲಕರ್ಣಿ, ಅಶ್ವಿನಿ ಕಿಲ್ಲೇದಾರ, ಡಾ. ಅತುಲಕುಮಾರ ಕಾಂಬಳೆ, ಹೇಮಾ ಚಿಕ್ಕಮಠ ಇತರರಿದ್ದರು 
ಜಿಲ್ಲೆ

ಗುರಿ ಸಾಧನೆಗೆ ಸತತ ಪರಿಶ್ರಮ ಅವಶ್ಯ

ನಿಪ್ಪಾಣಿ: ವಿದ್ಯಾರ್ಥಿ ತನ್ನ ಸರ್ವಾಂಗೀಣ ಅಭಿವೃದ್ಧಿಗಾಗಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಅತ್ಯವಶ್ಯ ಎಂದು ಬೆಳಗಾವಿ ಕೆಎಲ್‌ಎಸ್ ಸಂಸ್ಥೆಯ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ರಸಾಯನಶಾಸ್ತ್ರ ಪ್ರಾಧ್ಯಾಪಕ ಡಾ.ರವಿರಾಜ ಕುಲಕರ್ಣಿ ಅಭಿಪ್ರಾಯಪಟ್ಟರು.

ಇಲ್ಲಿನ ಜಿ.ಐ. ಬಾಗೇವಾಡಿ ಮಹಾವಿದ್ಯಾಲಯದ ಆಶೀರ್ವಾದ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಪ್ರಗ್ಯಾನ ವಿಜ್ಞಾನ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ವೈವಿಧ್ಯಮಯ ಕೌಶಲ ಬೆಳೆಸಿಕೊಳ್ಳಬೇಕು. ನಿರಂತರ ಪರಿಶ್ರಮ ಮತ್ತು ಏಕಾಗ್ರತೆಯಿಂದ ಸಾಧನೆ ಮಾಡಬೇಕು ಎಂದರು.

ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕ ಪ್ರವೀಣ ಬಾಗೇವಾಡಿ ಅವರು ಸಸಿಗೆ ನೀರುಣಿಸುವ ಮೂಲಕ ರಾಜ್ಯಮಟ್ಟದ ಪ್ರಗ್ಯಾನ ವಿಜ್ಞಾನ ಪ್ರದರ್ಶನ ಉದ್ಘಾಟಿಸಿದರು. ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹೇಶ ಬಾಗೇವಾಡಿ, ಪದವಿ ಪ್ರಾಚಾರ್ಯ ಡಾ. ಎಂ.ಎಂ. ಹುರಳಿ, ತೀರ್ಪುಗಾರರಾಗಿ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಎಂ.ಬಿ.ಕೋಥಳೆ, ನಿವೃತ್ತ ಗಣಿತ ಪ್ರಾಧ್ಯಾಪಕಿ
ಡಾ. ಮಲ್ಲವ್ವ ಶಂಕ್ರಿಕೊಪ್ಪ, ಬೆಳಗಾವಿಯ ಜಿ.ಎಸ್.ಎಸ್ ಮಹಾವಿದ್ಯಾಲಯದ ಡಾ. ಅರವಿಂದ ಹಲಗೇಕರ, ಮಹಾರಾಷ್ಟ್ರ ಅರ್ಜುನ ನಗರದ ದೇವಚಂದ ಮಹಾವಿದ್ಯಾಲಯದ ಡಾ. ಪಿ.ಡಿ.ಶಿರಗಾಂವೆ, ಕೆ.ಎಲ್.ಇ ಚಿಕ್ಕೋಡಿಯ ಬಿ.ಕೆ. ಮಹಾವಿದ್ಯಾಲಯದ ಡಾ. ಸಿದ್ದಲಿಂಗ ಮಟ್ಟೆಪ್ಪನವರ, ಗೋಕಾಕಿನ ಜೆ.ಎಸ್.ಎಸ್. ಮಹಾವಿದ್ಯಾಲಯದ ಡಾ. ನಾಗಪ್ಪ ತೇರದಾಳ ಭಾಗಿಯಾಗಿದ್ದರು.

ರಾಜ್ಯದ ವಿವಿಧ ಭಾಗಗಳಿಂದ 45 ಮಹಾವಿದ್ಯಾಲಯಗಳ 77 ಶಾಲೆಗಳ ಒಟ್ಟು 122 ತಂಡಗಳು ಪ್ರದರ್ಶನದಲ್ಲಿ ಭಾಗವಹಿಸಿ ವಿಜ್ಞಾನ ಮಾದರಿ ಪ್ರದರ್ಶಿಸಿದರು. ಪ್ರದರ್ಶನ ಪ್ರಾಯೋಜಿಸಿದ್ದ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಜ್ಯಮಟ್ಟದ ಕಲ್ಪಿತ ಸಂಸತ್ತು ಅಧಿವೇಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಪಿಯುಸಿ ವಿದ್ಯಾರ್ಥಿ ನಾಗೇಶ ಮೂಡಲಗಿ ಅವರನ್ನು ಗಣ್ಯರು ಸತ್ಕರಿಸಿದರು.
ಶ್ರೇಯಾ ಬಡ್ಡೆ, ಶಿವಲಿಂಗ ನಾಯಕ, ಪ.ಪೂ. ಪ್ರಾಚಾರ್ಯೆ ಹೇಮಾ ಚಿಕ್ಕಮಠ, ಐಕ್ಯೂಎಸಿ ಸಂಯೋಜಕ ಡಾ. ಅತುಲಕುಮಾರ ಕಾಂಬಳೆ, ಪ್ರದರ್ಶನದ ಸಂಚಾಲಕ ಕಾರ್ಯದರ್ಶಿ ವಿಶಾಲ ಚೌಗಲೆ, ಭಕ್ತಿ ಕಮತೆ, ಗೀತಾ ಕಮತೆ, ಸಂಚಾಲಕ ಕಾರ್ಯದರ್ಶಿ ಅಶ್ವಿನಿ ಕಿಲ್ಲೇದಾರ ಇತರರಿದ್ದರು.