ರಾಯಬಾಗ ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಉಪನ್ಯಾಸಕ ಎಸ್.ಡಿ.ಹನಗಂಡಿ ಮಾತನಾಡಿದರು. ಎಲ್.ಬಿ.ಚೌಗುಲೆ, ಲಕ್ಷ್ಮಣ ಬನಹಟ್ಟಿ, ವಿನಯ ಚೌಗುಲೆ, ಎಸ್.ಎ.ನಾಂದಣಿ ಇತರರಿದ್ದರು. 
ಜಿಲ್ಲೆ

ಗುರಿ ಮುಟ್ಟಲು ಛಲ ಅಗತ್ಯ

ರಾಯಬಾಗ: ಶಿಕ್ಷಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವೌಲ್ಯಯುತ ಶಿಕ್ಷಣ ಪಡೆದು ಬದುಕು ರೂಪಿಸಿಕೊಳ್ಳಬೇಕು ಎಂದು ಉಪನ್ಯಾಸಕ
ಎಸ್.ಡಿ.ಹನಗಂಡಿ ಹೇಳಿದರು.

ಪಟ್ಟಣದ ಬಿ.ಎ.ಚೌಗುಲೆ ಶಿಕ್ಷಣ ಸಂಸ್ಥೆಯಲ್ಲಿ ಸತೀಶ ಚೌಗುಲೆ, ಪಿ.ಯು ಕಾಲೇಜ್ ಹಾಗೂ ದಿಗ್ಗೇವಾಡಿಯ ಜಿ.ಬಿ.ಚೌಗುಲೆ ಪಿಯು ಕಾಲೇಜ್ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ, ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ವ್ಯಕ್ತಿ ತನ್ನ ನಡೆ-ನುಡಿಗಳಿಂದ ಸಮಾಜದಲ್ಲಿ ಉತ್ತಮ ಸಂಸ್ಕೃತಿ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳುತ್ತಾನೆ. ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಮುಟ್ಟಲು ಛಲ ಅಗತ್ಯ ಎಂದರು.

ಸಂಸ್ಥಾಪಕ ಅಧ್ಯಕ್ಷ ಮತ್ತು ನ್ಯಾಯವಾದಿ ಎಲ್.ಬಿ. ಚೌಗುಲೆ ಮಾತನಾಡಿ, ಮನುಷ್ಯನಿಗೆ ಅವಕಾಶಗಳು ಹೆಚ್ಚಾದಂತೆ ಸ್ಪರ್ಧೆ ಹೆಚ್ಚುತ್ತವೆ. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಸಿದ್ಧತೆ ಮಾಡಿಕೊಂಡು ಜೀವನದಲ್ಲಿ ಮುನ್ನುಗ್ಗಬೇಕೆಂದರು. ಸೈನಿಕ ಲಕ್ಷ್ಮಣ ಬನಹಟ್ಟಿ, ಕಾರ್ಯದರ್ಶಿ ವಿನಯ ಚೌಗುಲೆ, ಪ್ರಾಚಾರ್ಯ ಎಸ್.ಎ.ನಾಂದಣಿ,
ಎಸ್.ಎಸ್.ದಿಗ್ಗೇವಾಡಿ, ಉಪನ್ಯಾಸಕ ಎಂ.ಐ.ಬಡಿಗೇರ, ಎಸ್.ಎಸ್.ಐಹೊಳೆ, ಆರ್.ವೈ.ಯಮಗರ ಇತರರಿದ್ದರು.