ಮೂಡಲಗಿ ಪಟ್ಟಣದ ಶ್ರೀನಿವಾಸ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಮತ್ತು ರಾಷ್ಟ್ರೀಯ ಪೋಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಲೆಯ ಅಧ್ಯಕ್ಷ ಡಾ.ರಂಗಣ್ಣ ಸೋನವಾಲಕರ ಉದ್ಘಾಟಿಸಿದರು. ಎಸ್.ಎಂ. ಕುಂಬಾರ, ಎಸ್.ಬಿ. ಮಠಪತಿ, ವೆಂಕಟೇಶ ಪಾಟೀಲ ಇದ್ದರು. 
ಜಿಲ್ಲೆ

ಗುರಿ ತಲುಪಲು ಕಠಿಣ ಪರಿಶ್ರಮ ಅಗತ್ಯ

ರಾಘವೇಂದ್ರಗೌಡ ಭೀ ಪಾಟೀಲ್

ಮೂಡಲಗಿ: ವಿದ್ಯಾರ್ಥಿಗಳು ಗುರಿ ತಲುಪಲು ಸಮಯಪ್ರಜ್ಞೆ, ಪ್ರಾಮಾಣಿಕತೆ, ಕಠಿಣ ಪರಿಶ್ರಮ ರೂಢಿಸಿಕೊಳ್ಳಬೇಕು ಎಂದು ಶ್ರೀನಿವಾಸ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಡಾ.ರಂಗಣ್ಣ ಎನ್.ಸೋನವಾಲಕರ ಹೇಳಿದರು.

ಪಟ್ಟಣದ ಶ್ರೀ ಶ್ರೀನಿವಾಸ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆಯ ಶ್ರೀನಿವಾಸ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗುರುಪೂರ್ಣಿಮೆ ಮತ್ತು ರಾಷ್ಟ್ರೀಯ ಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಂಶುಪಾಲ ಎಸ್.ಬಿ.ಮಠಪತಿ ಮಾತನಾಡಿ, ಮಕ್ಕಳನ್ನು ದೇಶದ ಸತ್ಪ್ರಜೆಯಾಗಿ ರೂಪಿಸಲು ಪಾಲಕರು ಮತ್ತು ಶಿಕ್ಷಕರ ಜವಾಬ್ದಾರಿ ಮಹತ್ವದ್ದಾಗಿದೆ ಎಂದರು. ಉಪನ್ಯಾಸಕ ಎಸ್.ಎಂ. ಕುಂಬಾರ ಮಾತನಾಡಿದರು.

ವಿದ್ಯಾರ್ಥಿಗಳು ಗುರುವಿನ ಮಹತ್ವದ ಕುರಿತು ಭಾಷಣ, ನೃತ್ಯ, ಹಾಡು, ಏಕಲವ್ಯ ನಾಟಕ ಪ್ರಸ್ತುತ ಪಡಿಸಿದರು. ಕಾರ್ಯದರ್ಶಿ ವೆಂಕಟೇಶ ಪಾಟೀಲ, ಸಂಯೋಜಕ ಅನಿಲಕುಮಾರ ಐ.ಸಿ ಶಿಕ್ಷಕರು ಮತ್ತು ಪಾಲಕರು ಇದ್ದರು.