ಜಿಲ್ಲೆ

ಗುಮ್ಮಟನಗರಿಗೂ ವಕ್ಕರಿಸಿತೇ ಬ್ಲಾಕ್ ಫಂಗಸ್ ? ಕಣ್ಣು ಕಳೆದುಕೊಂಡ ಮಹಿಳೆ, ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನೆ !

ವಿಜಯಪುರ: ರಾಜ್ಯಾದ್ಯಂತ ಬೆಚ್ಚಿ ಬೀಳಿಸುತ್ತಿರುವ ಬ್ಲಾಕ್ ಫಂಗಸ್ ಕಾಯಿಲೆ ಗುಮ್ಮಟ ನಗರಿಗೂ ವಕ್ಕರಿಸಿಕೊಂಡಿದ್ದು ಕರೊನಾ ಮಧ್ಯೆ ಮತ್ತೊಂದು ಆತಂಕ ಕಾಣಿಸಿಕೊಂಡಿದೆ.

ಇಂಡಿ ತಾಲೂಕಿನ ಹಿರೇಮಸಳಿಯಲ್ಲಿ ಒಬ್ಬರಿಗೆ ಬ್ಲಾಕ್ ಫಂಗಸ್ ಕಾಣಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸುಮಾರು 45 ವರ್ಷದ ಮಹಿಳೆಯ ಮುಖದ ಒಂದು ಭಾಗ ಸಂಪೂರ್ಣ ಕಪ್ಪಾಗಿದ್ದು ಕಣ್ಣು ಕಸಣಿಸುತ್ತಿಲ್ಲ.

ಭಾನುವಾರವೇ ಈ ಪ್ರಕರಣ ಬೆಳಕಿಗೆ ಬಂದಿದ್ದು,

ರೋಗಿಯನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಇದೇ ರೀತಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆರು ಪ್ರಕರಣಗಳು ಪತ್ತೆಯಾಗಿವೆ ಎನ್ನಲಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತವನ್ನು ಸಂಪರ್ಕಿಸಲಾಗಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳಿಂದ ಮಾಹಿತಿ ಕಲೆ ಹಾಕಲಾಗುತ್ತಿದ್ದು ಶೀಘ್ರದಲ್ಲೇ ಮಾಹಿತಿ ನೀಡುವುದಾಗಿ ಪ್ರತಿಕ್ರಿಯಿಸಿದೆ.