ಜಿಲ್ಲೆ

ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಮನವಿ

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ-ದೊಡ್ಡೂರು ಮಾರ್ಗದ ರಸ್ತೆ ಕಾಮಗಾರಿ ಕಳಪೆಯಾಗಿದ್ದು, ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಕರವೇ( ಪ್ರವೀಣಶೆಟ್ಟಿ ಬಣ) ಘಟಕದಿಂದ ಉಪತಹಸೀಲ್ದಾರ್ ಎಂ.ಜಿ. ದಾಸಪ್ಪನವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸೋಮವಾರ ಸಲ್ಲಿಸಲಾಯಿತು.

3 ಕೋಟಿ ರೂ.ವೆಚ್ಚದಲ್ಲಿ 2.5 ಕಿ.ಮೀ. ರಸ್ತೆ ನಿರ್ವಣಗೊಂಡು ವರ್ಷ ಕಳೆಯುವಷ್ಟರಲ್ಲೇ ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿವೆ. ವಾಹನ ಸವಾರರು ಭಯದಿಂದ ಸಂಚರಿಸುವ ಪರಿಸ್ಥಿತಿ ನಿರ್ವಣವಾಗಿದೆ. ಜಿಲ್ಲಾಧಿಕಾರಿಗಳು ಈ ಕಾಮಗಾರಿಯನ್ನು ಖುದ್ದಾಗಿ ಪರಿಶೀಲಿಸಬೇಕು. ಸಂಪೂರ್ಣ ಹಾಳಾಗಿರುವ ರಸ್ತೆಯನ್ನು ಗುತ್ತಿಗೆದಾರದಿಂದ ಮರು ನಿರ್ಮಾಣ ಮಾಡಿಸಬೇಕು ಹಾಗೂ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ತಾಲೂಕು ಘಕಟದ ಅಧ್ಯಕ್ಷ ಮಹೇಶ ಕಲಘಟಗಿ, ಮಂಜುನಾಥ ಗಾಂಜಿ, ಇಲಿಯಾಸ ಮೀಯಾನವರ, ಜೇಲಾನಿ ಖವಾಸ್, ಸಾಹೇಬಲಾಲ್ ಕಲೇಗಾರ, ಮಲೀಕ ಶಿರಹಟ್ಟಿ, ಸೋಹಿಲ್​ವುುಳಗುಂದ ಇತರರಿದ್ದರು.