ಜಿಲ್ಲೆ

ಗುತ್ತಿಗೆ ಪೌರ ಕಾರ್ವಿುಕರ ಪ್ರತಿಭಟನೆ

ಹುಬ್ಬಳ್ಳಿ: ನೇರ ನೇಮಕಾತಿ, ನೇರ ವೇತನ ಹಾಗೂ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ಗುತ್ತಿಗೆ ಪೌರ ಕಾರ್ವಿುಕರು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಇಲ್ಲಿನ ಕೇಶ್ವಾಪುರದ ನಿವಾಸದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಕೆಲ ಕಾರ್ವಿುಕ ಮುಖಂಡರು ನೇರ ನೇಮಕಾತಿ ಮಾಡಿಸುವುದಾಗಿ ಹೇಳಿ ಪೌರ ಕಾರ್ವಿುಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ನೀಡಿರುವ ಬಡ ಪೌರ ಕಾರ್ವಿುಕರು ಪರದಾಡುವಂತಾಗಿದೆ ಎಂದು ದೂರಿದರು. ಮನವಿ ಸ್ವೀಕರಿಸಿ ಮಾತನಾಡಿದ ಸಚಿವ ಜಗದೀಶ ಶೆಟ್ಟರ್, ಪೌರ ಕಾರ್ವಿುಕರು ಮಧ್ಯವರ್ತಿಗಳಿಗೆ ಹಣ ನೀಡಬಾರದು. ನೇರ ನೇಮಕಾತಿ, ನೇರ ವೇತನ ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.