ಧಾರವಾಡ: ಗುತ್ತಿಗೆ ಪೌರ ಕಾರ್ವಿುಕರಿಗೆ ನೇರ ವೇತನ ಪಾವತಿ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜಿಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಪೌರ ಕಾರ್ವಿುಕರ ಮತ್ತು ನೌಕರರ ಸಂಘದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಮೂರು ದಿನಗಳಿಂದ ಹಮ್ಮಿಕೊಂಡಿದ್ದ ಧರಣಿ ಶುಕ್ರವಾರ ಅಂತ್ಯಗೊಂಡಿದೆ.
ಶುಕ್ರವಾರ ಕಾರ್ವಿುಕರು ಅರೆಬೆತ್ತಲೆ ಪ್ರತಿಭಟನೆ ನಡೆಸಿ ಗಮನ ಸೆಳೆದರು. ಬುಧವಾರದಿಂದ ಆರಂಭವಾದ ಧರಣಿಯಲ್ಲಿ ಸುಮಾರು 30 ಜನ ಪೌರ ಕಾರ್ವಿುಕರು ಉಪವಾಸ ಆರಂಭಿಸಿದ್ದರು.
ಕಾರ್ವಿುಕರ ಪ್ರತಿಭಟನೆಗೆ ಮನ್ನಣೆ ನೀಡಿ ಸ್ಥಳಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ, ಒಂದು ವಾರದೊಳಗೆ ನೇರ ನೇಮಕಾತಿ, ನೇರ ವೇತನ ಪಾವತಿ ಪೌರ ಕಾರ್ವಿುಕರ ಪಟ್ಟಿಗೆ ಅನುಮೋದನೆ ನೀಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿಗೆ ನೀಡಿದ ಕಾರ್ವಿುಕರು ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲು ಒಪ್ಪಿದರು.
ಸಂಘದ ಜಿಲ್ಲಾಧ್ಯಕ್ಷ ಡಾ. ವಿಜಯ ಗುಂಟ್ರಾಳ, ನಾಗರಾಜ ಸಣ್ಣಮನಿ, ರಾಖೇಶ ದೊಡಮನಿ, ನರಸಿಂಹ ಮಾದರ, ಶಿವಾನಂದ ನಾರಾಯಣಪುರ, ಮಲ್ಲಿಕಾರ್ಜುನ ಚಲವಾದಿ, ಇತರರು ಇದ್ದರು.
ದುರ್ಬಳಕೆ ಆರೋಪ
ಹುಬ್ಬಳ್ಳಿ: ವಿಜಯ ಗುಂಟ್ರಾಳ ಗುತ್ತಿಗೆ ಪೌರ ಕಾರ್ವಿುಕರನ್ನು ದುರುಪಯೋಗ ಮಾಡಿಕೊಂಡು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಪೌರ ಕಾರ್ವಿುಕರ ಸಂಘದ ಗೌರವಾಧ್ಯಕ್ಷ ಗಂಗಾಧರ ಟಗರಗುಂಟಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಗುತ್ತಿಗೆ ಪೌರ ಕಾರ್ವಿುಕರ ಸಂಘ ನೋಂದಣಿಯಾಗಿಲ್ಲ. ನಮ್ಮ ಸಂಘ ಅಧಿಕೃತವಾಗಿ ನೋಂದಣಿಯಾಗಿದ್ದು, ಪೌರ ಕಾರ್ವಿುಕರ ಪರ ಹೋರಾಡುತ್ತಿದೆ. ಶಾಸಕ ಪ್ರಸಾದ ಅಬ್ಬಯ್ಯ ವಿರುದ್ಧ ಅವರ ಆರೋಪ ಸುಳ್ಳು ಎಂದರು. ಬಸಪ್ಪ ಮಾದರ, ನಿಂಗಪ್ಪ ಮೊರಬದ ಇತರರು ಇದ್ದರು.
EndFragment