ಚಿಕ್ಕಮಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ದಲಿತ ಚಳವಳಿಯ ಹರಿಕಾರ ಪ್ರೊ.ಬಿ. ಕೃಷ್ಣ ಪ್ಪ ಅವರ ೮೭ನೇ ಜಯಂತಿ ಮತ್ತು ಡಿಎಸ್‌ಎಸ್ ಸದಸ್ಯತ್ವ ಆಂದೋಲನದ ಸಮಾರಂಭವನ್ನು ಶಾಸಕ ಎಚ್.ಡಿ.ತಮ್ಮಯ್ಯ ಉದ್ಘಾಟಿಸಿದರು. ಸುಜಾತ ಶಿವಕುಮಾರ್, ತರೀಕೆರೆ ಎನ್.ವೆಂಕಟೇಶ್, ಶ್ರೀಧರ್ ಕಲಿವೀರ್, ಶಿವಾನಂದ ಸಾವಳಗಿ ಮತ್ತಿತರರಿದ್ದರು. 
ಜಿಲ್ಲೆ

ಗುತ್ತಿಗೆ ಕಾರ್ಮಿಕರ ಮೂಲ ಬೇಡಿಕೆ ಈಡೇರಿಸುವ ಭರವಸೆ

ಚಿಕ್ಕಮಗಳೂರು: ಜಿಲ್ಲಾ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಕರ್ಮಚಾರಿಗಳಿಗೆ ಖಾಯಂ ನೇಮಕ ಹಾಗೂ ನೇರಪಾವತಿ ಸೌಲಭ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಭರವಸೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ದಲಿತ ಚಳವಳಿಯ ಹರಿಕಾರ ಪ್ರೊ.ಬಿ. ಕೃಷ್ಣ ಪ್ಪ ಅವರ ೮೭ನೇ ಜಯಂತಿ ಮತ್ತು ಡಿಎಸ್‌ಎಸ್ ಸದಸ್ಯತ್ವ ಆಂದೋಲನದ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯ ನಗರಸಭೆ, ಪುರಸಭೆ, ಪಪಂ, ಆಸ್ಪತ್ರೆ ಮತ್ತು ಗ್ರಾಪಂಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ನೇರ ಪಾವತಿಯಡಿ ನೇಮಕಾತಿ ಮಾಡಿಕೊಂಡು ಗುತ್ತಿಗೆ ಪದ್ಧ ತಿ ರದ್ದುಗೊಳಿಸಲು ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಕಾರ್ಮಿಕ ವರ್ಗಕ್ಕೆ ಸ್ಪಂದಿಸಲಾಗುವುದು ಎಂದರು.

ಜೀವನದ ಹಂಗನ್ನು ತೊರೆದು ನಗರಾದ್ಯಂತ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಸದಾಸಿದ್ಧ. ಆ ನಿಟ್ಟಿನಲ್ಲಿ ಜಿಲ್ಲೆಯ ಸ್ವಚ್ಚತಾ ಕರ್ಮಚಾರಿಗಳು ಮನೆ, ನಿವೇಶನ, ನಿಗಧಿತ ಸಮಯಕ್ಕೆ ವೇತನದ ಬೇಡಿಕೆಗಳನ್ನು ಪುರಸ್ಕರಿಸಿ ಅವರಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.

ನಾಡಿನ ದಲಿತ ಚಳವಳಿ ಹರಿಕಾರ ಪ್ರೊ.ಬಿ.ಕೃಷ್ಣಪ್ಪ ಅವರು ಅಸಮಾನತೆ, ಅಸ್ಪÊಷ್ಯತೆ ವಿರುದ್ಧ ಹೋರಾಡಿದ್ದಲ್ಲದೇ ಶೋಷಿತರ ಧ್ವನಿಯಾದವರು. ಕೇವಲ ದಲಿತ ಜನಾಂಗಕ್ಕೆ ಸೀಮಿತರಾಗದೇ ಬದುಕಿನಲ್ಲಿ ನೊಂದ ಎಲ್ಲ ವರ್ಗಕ್ಕೆ ನ್ಯಾಯ ಕೊಡಿಸಲು ಚಳವಳಿ ರೂಪಿಸಿ ಶೋಷಿತರ ಏಳಿಗೆಗೆ ಆಧಾರವಾದವರು ಎಂದರು.

ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟು-ಸಾವು ಸಾಮಾನ್ಯ. ಈ ನಡುವೆ ಬಡವರು, ಶೋಷಿತರನ್ನು ಕಾಪಾಡುವನಲ್ಲಿ ಹೋರಾಡುವ ಸಂಸ್ಕೃತಿ ಬೆಳೆಸಿಕೊಂಡಲ್ಲಿ ಮರಣ ನಂತರವು ಜನಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಲು ಸಾಧ್ಯ ಎಂಬುದಕ್ಕೆ ಪ್ರೊ.ಬಿ.ಕೃಷ್ಣಪ್ಪ ಅವರ ಹೋರಾಟವೇ ಸಾಕ್ಷಿ ಎಂದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರೊ.ಬಿ.ಕೃಷ್ಣಪ್ಪ ಬಿ.ಆರ್.ಅಂಬೇಡ್ಕರ್ ಅವರ ಆಶಯದ ರಥವನ್ನು ಎಳೆದವರು. ಸಾಧ್ಯವಾದಲ್ಲಿ ನಾವುಗಳು ಆ ರಥವನ್ನು ಮುಂದೇಳೆಯಲು ಪ್ರಯತ್ನಿಸಬೇಕೇ ಹೊರತು ಹಿಂದಕ್ಕೆ ತರುವ ಕೆಲಸಕ್ಕೆ ಕೈಹಾಕಬಾರದು ಎಂದು ಹೇಳಿದರು.

ಪ್ರಸ್ತುತ ಸಂವಿಧಾನದಡಿ ಮೀಸಲಾತಿ ಲಾಭವನ್ನು ಪಡೆದು ಸಾಮಾಜಿಕ ಹಾಗೂ ಆರ್ಥಿಕವಾಗಿ ಉನ್ನತ ಸ್ಥಾನಕ್ಕೇರಿರುವ ಜನರು ತನ್ನ ಬೇರನ್ನು ಮರೆಯಬಾರದು. ಒಂದು ವೇಳೆ ಮೂಲ ಮರೆತರೇ ಅಂಬೇಡ್ಕರ್ ಅವರ ತ್ಯಾಗಕ್ಕೆ ಅಪಚಾರ, ಶಕ್ತಿಕೊಟ್ಟ ವೇದಿಕೆಗೆ ದ್ರೋಹವೆಸಗಿದಂತೆ. ಹೀಗಾಗಿ ಮೂಲವನ್ನು ಅರಿತು ಸಮಾಜದ ವೈಚಾರಿಕ ಚಿಂತನೆಗಳಡಿ ಜೀವಿಸಬೇಕಿದೆ ಎಂದರು.

ಡಿಎಸ್‌ಎಸ್ ಸದಸ್ಯತ್ವ ಆಂದೋಲನ ಕೇವಲ ರಶೀದಿಗಳಿಗೆ ಸೀಮಿತವಾಗದೇ ಹೃದಯಕ್ಕೆ ನಾಟಬೇಕು. ವೈಚಾರಿಕವಾಗಿ ವಿಚಾರವನ್ನು ಅಳವಡಿಸಿಕೊಂಡು ಸದಸ್ಯತ್ವ ಪಡೆದಾಗ ಮಾತ್ರ ಸದಸ್ಯತ್ವಕ್ಕೆ ಶಕ್ತಿ ಬರಲಿದೆ. ಸುಮ್ಮನೆ ರಶೀದಿ ಕೊಟ್ಟಲ್ಲಿ ಆಶಯಗಳು ಈಡೇರುವುದಿಲ್ಲ. ವೈಚಾರಿಕತೆ ಅಳವಡಿಸಿಕೊಂಡು ಹೃದಯದಲ್ಲಿ ಪ್ರತಿಷ್ಟಾಪಿಸಿಕೊಂಡು ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯದ ಹೋರಾಟವನ್ನು ಮುನ್ನಡೆಸಬೇಕು ಎಂದರು.

ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಗುತ್ತಿಗೆ ಕಾರ್ಮಿಕರಿಗೆ ಸರ್ಕಾರ ನಿಗದಿಗೊಳಿಸಿರುವ ವೇತನ ಜೀವನಕ್ಕೆ ಸಾಕಾಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಹಾಗೂ ತುರ್ತು ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡುಬAದಲ್ಲಿ ತೀವ್ರ ಸಂಕಷ್ಟ ಎದುರಾಗಲಿದೆ. ಹೀಗಾಗಿ ಸಮಾಜಕ್ಕಾಗಿ ದುಡಿಯುವ ಸ್ವಚ್ಛತಾ ಕರ್ಮಚಾರಿಗಳ ಮೂಲಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಎಸ್‌ಎಸ್ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್, ದಲಿತರ ಮೇಲಿನ ದೌರ್ಜನಗಳನ್ನು ತಡೆಗಟ್ಟಲು ೧೯೭೪ರಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರು ಡಿಎಸ್‌ಎಸ್ ಹುಟ್ಟುಹಾಕಿ ಶೋಷಿತರ ಪರ ಹೋರಾಟಕ್ಕಿಳಿದು ಬದುಕಿನುದ್ಧಕ್ಕೂ ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ ಮಹಾನ್ ನಾಯಕ ಎನಿಸಿಕೊಂಡರು ಎಂದು ಸ್ಮರಿಸಿದರು.

ಪ್ರಸ್ತುತ ರಾಜ್ಯಾದ್ಯಂತ ವಿವಿಧೆಡೆ ಗುತ್ತಿಗೆ ಆಧಾರದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ರಾಜ್ಯಸರ್ಕಾರ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ನಿರಂತರವಾಗಿ ಸ್ವಾಸ್ಥö್ಯ ಸಮಾಜಕ್ಕಾಗಿ ಸೇವೆಯಲ್ಲಿರುವ ಪೌರಕಾರ್ಮಿಕರ ಮೂಲಬೇಡಿಕೆ ಈಡೇರಿಸುವ ಮೂಲಕ ಕಾರ್ಮಿಕರ ಬದುಕಿಗೆ ಆಸರೆಯಾಗಬೇಕು ಎಂದು ಡಿಎಸ್‌ಎಸ್ ಪದಾಧಿಕಾರಿಗಳು ಇದೇ ವೇಳೆ ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಡಿಎಸ್‌ಎಸ್ ಸದಸ್ಯತ್ವ ಆಂದೋನದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಹೆಸರು ನೋಂದಾಯಿಸಿದರು. ಈ ಸಂದರ್ಭದಲ್ಲಿ ತರೀಕೆರೆ ಶಾಸಕ ಜಿ.ಎಚ್.ಶ್ರೀನಿವಾಸ್, ಸಣ್ಣ ಮತ್ತು ಮಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎನ್.ರಾಜಶೇಖರ್, ಡಿಎಸ್‌ಎಸ್ ಹಿರಿಯ ಮುಖಂಡ ಶ್ರೀಧರ್ ಕಲಿವೀರ್, ರಾಜ್ಯ ಸಂಘಟನಾ ಸಂಚಾಲಕರಾದ ಎಂ.ಶಿವಾನAದ ಸಾವಳಗಿ, ಮಾರುತಿ ಬಿ.ಹೊಸಮನಿ, ರಾಜಶೇಖರ್, ವೆಂಕಟ ರಾಮ ಪ್ಪ, ದುರ್ಗಾದಾಸ್, ಎನ್.ಲೋಕೇಶ್, ಕೆ.ನಂಜಪ್ಪ, ಆದಿನಾರಾಯಣ, ತಮ್ಮಣ್ಣ ಕಾನಗಡ್ಡಿ, ಮಹದೇವ ಪ್ರಸಾದ್ ಮತ್ತಿತರರಿದ್ದರು.