ಜಿಲ್ಲೆ

ಗುಣಮಟ್ಟದ ಹಾಲು ಪೂರೈಕೆಯಿಂದ ಡೇರಿಗಳು ಸದೃಢ

ಮಳವಳ್ಳಿ ತಾಲೂಕಿನ ರಾವಣಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮನ್‌ಮುಲ್ ಮಳವಳ್ಳಿ ವಿಭಾಗದ ಉಪ ವ್ಯವಸ್ಥಾಪಕ ಸಿ.ಎನ್.ಮಧುಶಂಕರ್ ಮಾತನಾಡಿದರು. ಶಿವರಾಜು, ನಾಗಮ್ಮ ಇತರರು ಇದ್ದರು.

ಮಳವಳ್ಳಿ: ಗುಣಮಟ್ಟದ ಹಾಲು ಪೂರೈಸಿದರೆ ಉತ್ಪಾದಕರಿಗೆ ಉತ್ತಮ ಬೆಲೆ ಸಿಗುವುದರ ಜತೆಗೆ ಡೇರಿಗಳು ಆರ್ಥಿಕವಾಗಿ ಸದೃಢಗೊಳ್ಳಲಿದೆ ಎಂದು ಮನ್‌ಮುಲ್ ಮಳವಳ್ಳಿ ವಿಭಾಗದ ಉಪ ವ್ಯವಸ್ಥಾಪಕ ಸಿ.ಎನ್.ಮಧುಶಂಕರ್ ಅಭಿಪ್ರಾಯಪಟ್ಟರು.


ತಾಲೂಕಿನ ರಾವಣಿ ಗ್ರಾಮದ ಡೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿ, ಷೇರುದಾರು ಸಂಘದ ಆಡಳಿತ ಮಂಡಳಿಯಲ್ಲಿ ಲೋಪಗಳು ಕಂಡುಬಂದರೆ ಸರಿದಾರಿಗೆ ತರಲು ಪ್ರಶ್ನಿಸುವ ಮೂಲಕ ಎಚ್ಚರಿಸಬೇಕು. ಗ್ರಾಮದ ಒಂದು ಡೇರಿಯಿಂದ ಬಹಳಷ್ಟು ಬಡಕುಟುಂಬಗಳು ಬದುಕು ಕಟ್ಟಿಕೊಂಡಿವೆ ಎಂದರು.


ಸಂಘದ ಕಾರ್ಯದರ್ಶಿ ನಂಜುಂಡಸ್ವಾಮಿ ವಾರ್ಷಿಕ ಸಭೆಯ ವರದಿ ಮಂಡಿಸಿ, ಪ್ರಸ್ತುತ ಹಾಲು ಶೇಖರಣೆ ಮತ್ತು ಮಾರಾಟದ ವಹಿವಾಟಿನಿಂದ ಸಂಘವು 4,81,839 ರೂ.ಆದಾಯ ಗಳಿಸಿದೆ ಎಂದು ಮಾಹಿತಿ ನೀಡಿದರು.

ಸಂಘದ ಅಧ್ಯಕ್ಷ ಶಿವರಾಜು, ಉಪಾಧ್ಯಕ್ಷೆ ನಾಗಮ್ಮ, ನಿರ್ದೇಶಕರಾದ ಆರ್.ಎಂ.ಚಂದ್ರಶೇಖರ್, ಆರ್.ಎಂ.ಲೋಕೇಶ್, ಆರ್.ಎಂ.ರವಿ, ರಮೇಶ್, ಆರ್.ಎಂ.ನಾಗರಾಜು, ನಂಜುಂಡೇಗೌಡ, ರಾಜೇಶ್ವರಿ, ನಾಗಮ್ಮ, ಶಾರದಮ್ಮ, ಹಾಲು ಪರೀಕ್ಷಕ ಶಂಭಯ್ಯ, ಸಹಾಯಕರಾದ ನಾಗೇಂದ್ರಗೌಡ, ಆರ್.ಎನ್.ನವೀನ ಇತರರು ಇದ್ದರು.