ಬೆಳಗಾವಿ: ಗುಣಮಟ್ಟದ ಆರೋಗ್ಯ ಸೇವೆಗಾಗಿ ಅರಿಹಂತ ಆಸ್ಪತ್ರೆ ಹೆಸರು ವಾಸಿಯಾಗಿದ್ದು, ನೂತನವಾಗಿ ಪ್ರಾರಂಭಿಸಿರುವ ಡಯಾಲಿಸಿಸ್ ಕೇಂದ್ರ ಮೂತ್ರಪಿಂಡ ರೋಗಿಗಗಳಿಗೆ ಸಹಕಾರಿಯಾಗಲಿದೆ ಎಂದು ಬೆಂಗಳೂರಿನ ಅಸ್ಟರ್ ಸಿಎಂಐ ಆಸ್ಪತ್ರೆ ಹಿರಿಯ ಮೂತ್ರಪಿಂಡ ತ ಡಾ.ವಿದ್ಯಾಶಂಕರ.ಪಿ ಅಭಿಪ್ರಾಯಪಟ್ಟರು.
ಇಲ್ಲಿನ ನೆಹರು ನಗರದಲ್ಲಿರುವ ಅರಿಹಂತ ಆಸ್ಪತ್ರೆಯಲ್ಲಿ ಸೋಮವಾರ ದೀತ ಹೆಲ್ತ್ ಕೇರ್ ಪೆ.ಲಿ. ಟಕದ ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಮೂತ್ರಪಿಂಡ ರೋಗಿಗಳಿಗಾಗಿ ಸುಧಾರಿತ ಮತ್ತು ಸುಲಭ ಚಿಕಿತ್ಸೆ ನೀಡಲು ಅರಿಹಂತ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಿದೆ. ಈ ಭಾಗದ ಜನರಿಗೆ ಗುಣಮಟ್ಟದ ಸೇವೆ ದೊರೆಯುವಂತಾಗಿದೆ ಎಂದರು.
ಆಸ್ಪತ್ರೆಯ ಸಿಇಒ ಹಾಗೂ ಮುಖ್ಯ ಹೃದಯ ಶಸಚಿಕಿತ್ಸಕ ಡಾ.ಎಂ.ಡಿ.ದೀತ ಮಾತನಾಡಿ, ನಾವು ಈ ಕೇಂದ್ರವನ್ನು ರೋಗಿಗಳಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಸ್ಥಾಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಡಯಾಲಿಸಿಸ್ಗಾಗಿ ಸ್ಮಾರ್ಟ್ ಕಾರ್ಡ್ ಪರಿಚಯಿಸುತ್ತೇವೆ ಎಂದು ತಿಳಿಸಿದರು.
ಡಯಾಲಿಸಿಸ್ ಕೇಂದ್ರದ ಮುಖ್ಯ ತ ಡಾ.ವಿಜಯಕುಮಾರ ಪಾಟೀಲ ಮಾತನಾಡಿದರು.
ಅರಿಹಂತ ಆಸ್ಪತ್ರೆಯ ನಿರ್ದೇಶಕ ಅಭಿನಂದನ ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ಮೂತ್ರಪಿಂಡ ಚಿಕಿತ್ಸಾ ಸೇವೆ ನೀಡಲು ಆಸ್ಪತ್ರೆ ಆರಂಭಿಸಲಾಗಿದೆ. ಅರಿಹಂತ ಆಸ್ಪತ್ರೆ ಅತ್ಯುತ್ತಮ, ಕೈಗಟುಕುವ ಮತ್ತು ಸುಲಭವಾದ ಆರೋಗ್ಯ ಸೇವೆ ಒದಗಿಸುವ ಮೂಲಕ ಮೂತ್ರಪಿಂಡ ರೋಗಿಗಳಿಗೆ ಸುಧಾರಿತ ಚಿಕಿತ್ಸೆ ನೀಡಲಿದೆ ಎಂದರು.
ಡಾ.ವರದರಾಜ ಗೊಕಾಕ, ಡಾ.ಪ್ರಭು ಹಳಕಟ್ಟಿ, ಡಾ.ಸೂರಜ್, ಡಾ.ಸಂಜೀವ, ಡಾ.ಅಂಬರೀಶ ನೆರ್ಲಿಕರ್, ಡಾ. ಮಾಧುರಿ ದೀತ, ಡಾ.ಅಮೃತಾ ಜೋಷಿ, ಡಾ.ಅಭಿಜಿತ್ ಹಿರೇಮಠ, ಡಾ.ಯುವರಾಜ ಯದ್ರಾವಿ ಇತರರಿದ್ದರು.