ಚಿತ್ರದುರ್ಗ: ಕಾಂಗ್ರೆಸ್ ಸರ್ಕಾರದ‘ಗ್ಯಾರೆಂಟಿ’ಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯಿಂದ ವಿದ್ಯುತ್ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಪ್ಪಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.
ಇಂಧನ ಇಲಾಖೆ ಹಾಗೂ ಬೆಸ್ಕಾಂ ಆಶ್ರಯದಲ್ಲಿ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಯೋ ಜನೆಗೆ ಜಿಲ್ಲಾ ಮಟ್ಟದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು. ಕಾಂಗ್ರೆಸ್ ಕೊಟ್ಟಿದ್ದ ಭರವಸೆಯಂತೆ ಈ ಯೋಜನೆ ಸೇರಿ ಮೂರು ಗ್ಯಾರಂ ಟಿಗಳನ್ನು ಸರ್ಕಾರ ಅನುಷ್ಠಾನಗೊಳಿಸಿದೆ.
ಜಿಲ್ಲೆಯ 4.7 ಲಕ್ಷ ಗೃಹ ವಿದ್ಯುತ್ ಬಳಕೆದಾರರ ಪೈಕಿ 3.37 ಲಕ್ಷ ಬಳಕೆದಾರರು ನೋಂದಾಯಿಸಿದ್ದಾರೆ. ಜುಲೈ 1ರಿಂದ ಯೋಜನೆ ಲಾಭ ಬಳಕೆ ದಾರರಿಗೆ ಸಿಗಲಿದೆ. ಪ್ರತಿ ಮನೆಯ 200 ಯುನಿಟ್ ಗೃಹ ವಿದ್ಯುತ್ ಬಳಕೆಗೆ ಶೂನ್ಯ ಬಿಲ್‌ನೀಡಲಾಗುವುದು. ಜಿಲ್ಲೆಯ 4.7 ಲಕ್ಷ ಬಳಕೆ ದಾರರಿಗೆ,ಪ್ರತಿ ತಿಂಗಳು ರೂ.22.27 ಕೋಟಿ ರೂ.ವಿದ್ಯುತ್ ಬಿಲ್‌ನ್ನು ಸರ್ಕಾರ ಬೆಸ್ಕಾಂಗೆ ಪಾವತಿಸಲಿದೆ. ಜಿಲ್ಲೆಯಲ್ಲಿ ಗುಣಮಟ್ಟದ ವಿದ್ಯುತ್ ಸರಬರಾಜಿಗೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ,ನಮ್ಮ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣದಿಂದ ಯೋಜನೆಗಳ ಜಾರಿಗೆ ಪ್ರಯತ್ನಿಸುತ್ತಿದೆ. ಶಕ್ತಿ,ಅನ್ನಭಾ ಗ್ಯ,ಈಗ ಗೃಹಜ್ಯೋತಿ ಜಾರಿಯಾಗಿದೆ ಎಂದರು.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ,ಸರ್ಕಾರದ ಗ್ಯಾರಂಟಿಗಳ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವ ರು ಮೆಚ್ಚುಗೆ ವ್ಯಕ್ತಪಡಿಸಿ ಸಿಎಂಗೆ ಪತ್ರ ಬರೆದಿದ್ದಾರೆ. ಅನ್ನಭಾಗ್ಯದಡಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತಿದ್ದು,ಸದ್ಯದಲ್ಲೇ ಅಕ್ಕಿ ಖರೀದಿಸಿ ಫಲಾನುಭವಿಗಳಿಗೆ ವಿತರಿಸಲಾಗುವುದು. ಯುವನಿಧಿ ಯೋಜನೆ ಕೂಡ ಶೀಘ್ರಜಾರಿಯಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ,ಗೃಹಜ್ಯೋತಿ ನೋಂದಣಿಯಲ್ಲಿ ಜಿಲ್ಲೆಯಲ್ಲಿ ಚಿತ್ರದುರ್ಗ ತಾಲೂಕು ಮೂಂಚೂ ಣಿಯಲ್ಲಿದೆ ಎಂದರು. ಡಿಸಿ ಜಿಆರ್‌ಜೆ ದಿವ್ಯಾಪ್ರಭು ಅವರು ಮಾತನಾಡಿದರು.
ಸಾಂಕೇತಿಕವಾಗಿ ಐವರು ಫಲಾನುಭವಿಗಳಿಗೆ ಶೂನ್ಯವಿದ್ಯುತ್‌ಬಿಲ್‌ಗಳನ್ನು ವಿತರಿಸಲಾಯಿತು. ಬೆಸ್ಕಾಂನ ದಾವಣಗೆರೆ ವಲಯದ ಅಧೀಕ್ಷಕ ಇಂಜಿನಿಯರ್ ಜಗದೀಶ್ ಸ್ವಾಗತಿಸಿದರು. ಚಿತ್ರದುರ್ಗ ವಿಭಾಗದ ಇಇ ಜಯಣ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ವಂದಿಸಿದರು.