ಜಿಲ್ಲೆ

ಗುಣಮಟ್ಟದ ರಸ್ತೆ, ಚರಂಡಿ ಗ್ರಾಮಗಳ ಪ್ರಗತಿಯ ಸಂಕೇತ

ಸರಗೂರು: ಗ್ರಾಮೀಣ ಭಾಗದಲ್ಲಿ ಕಂಡುಬರುವ ಗುಣಮಟ್ಟದ ರಸ್ತೆ, ಚರಂಡಿ ಸೇರಿದಂತೆ ಇತರ ಮೂಲ ಸೌಕರ್ಯಗಳು ಆಯಾ ಗ್ರಾಮಗಳ ಪ್ರಗತಿಯ ಸಂಕೇತ ಎಂದು ಶಾಸಕ ಅನಿಲ್‌ಕುಮಾರ್ ತಿಳಿಸಿದರು.

ತೆರಣಿಮುಂಟಿ ಗ್ರಾಮದ ದಲಿತರ ಬೀದಿಯಲ್ಲಿ 40 ಲಕ್ಷ ರೂ.ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗೆ ಶಾಸಕ ಅನಿಲ್ ಕುಮಾರ್ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಅಗತ್ಯವಿರುವ ಮೂಲ ಸೌಕರ್ಯಗಳನ್ನು ಹಂತ ಹಂತವಾಗಿ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ವಿವಿಧ ಇಲಾಖೆಯ ಅನುದಾನ ತಂದು ಗ್ರಾಮಕ್ಕೆ ಇನ್ನಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ತಿಳಿಸಿದರು.

ತೆರಣಿಮುಂಟಿ ಗ್ರಾಮಕ್ಕೆ ದೇವಸ್ಥಾನಗಳು, ಅಂಬೇಡ್ಕರ್ ಭವನ, ರಸ್ತೆಗಳಿಗೆ ಅನುದಾನದಲ್ಲಿ ನೀಡಿದ್ದಿನಿ. ಅದರಂತೆ ಇನ್ನೂ ರಸ್ತೆ ಡಾಂಬರೀಕರಣಕ್ಕೆ ಎರಡು ಮೂರು ಬೀದಿಗಳು ಇವೆ ಎಂದು ಮನವಿ ಮಾಡಿದ್ದೀರಾ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿಗೊಳಿಸಲು ಮುಂದಾಗುತ್ತಾನೆ ಎಂದರು.

ಸರ್ಕಾರದ ವಿವಿಧ ಯೋಜನೆಗಳಿಂದ ಗ್ರಾಮಗಳ ಅಭಿವೃದ್ಧಿಗಾಗಿ ಹಣ ತಂದು ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ . ಗುಣಮಟ್ಟ ಕಾಯ್ದುಕೊಳ್ಳುವುದು ಜನಪ್ರತಿನಿಧಿಗಳ ಜತೆ ಗ್ರಾಮಸ್ಥರೂ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ನಾಗರತ್ನಾ, ಸದಸ್ಯರು ಬಿ.ಶಿವಣ್ಣ, ಸದಸ್ಯೆ ರಾಣಿ ತಿಮ್ಮಪ್ಪ, ಕಾಂಗ್ರೆಸ್ ಮುಖಂಡ ಎಂ.ಬಿ.ಆನಂದ, ಸಂತೋಷ್, ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು, ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಕಳಸೂರು ಬಸವರಾಜು, ಉಯ್ಯಂಬಳ್ಳಿ ನಾಗರಾಜು, ಬಸವರಾಜು, ವೃತ್ತ ನಿರೀಕ್ಷಕ ಪ್ರಸನ್ನ ಕುಮಾರ್,ಇಒ ಪ್ರೇಮ್ ಕುಮಾರ್, ಪಿಡಿಒ ಪರಮೇಶ್, ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.