ಶಹಾಪುರ: ನಗರದಲ್ಲಿ ನಡೆಯುತ್ತಿರುವ ೨ ಕೋಟಿ ರೂ. ವೆಚ್ಚದ ಡ್ರೆÊನೇಜ್ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಮಂಗಳವಾರ ಭೇಟಿ ನಿಡಿ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ಈ ಕಾಮಗಾರಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಹಾಗೊಂದು ವೇಳೆ ಕಳಪೆ ಎಂದು ಕಂಡುಬAದಲ್ಲಿ ತಕ್ಷಣಕ್ಕೆ ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನಿಡಿದರು.
ನಗರದ ಹಳಿಸಗರ ಬಡಾವಣೆಯಲ್ಲಿ ನಡೆದಿರುವ ಚರಂಡಿ ಕಾಮಗಾರಿ ಪರಿಶೀಲಿಸಿದರು. ಅಲ್ಲದೆ ವಿವಿಧ ಬಡಾವಣೆಯ ನೀರು, ಕೆನಾಲ್ ನೀರು, ಮತ್ತು ಕೆರೆಯ ಹೆಚ್ಚಿನ ನೀರು ಒಂದೇ ಡ್ರೈನೇಜ್‌ಗೆ ಬರುತ್ತದೆ. ಈಗಾಗಲೇ ಪ್ರಸ್ತುತ ಲಭ್ಯವಿರುವ ಅನುದಾನದಲ್ಲಿ ಕಾಮಗಾರಿ ನಡೆದಿದ್ದು, ರಸ್ತೆ ಮಧ್ಯೆ ಹಳೆಯದಾದ ಕಲ್ಲು ಸೇತುವೆ ಇದ್ದು, ಅದನ್ನು ಬರುವ ದಿನಗಳಲ್ಲಿ ಅನುದಾನ ಬಳಸಿಕೊಂಡು ಕಾಮಗಾರಿ ನಿರ್ವಹಿಸಲಾಗುವುದು. ಇನ್ನೂ ೬೦ ಲಕ್ಷ ರೂ. ವೆಚ್ಚದ ಉಳಿದ ಡ್ರೆÊನೇಜ್ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
ಪೌರಾಯುಕ್ತ ರಮೇಶ ಬಡಿಗೇರ, ಗುರುನಾಥರೆಡ್ಡಿ ಪೊಲೀಸ್ ಪಾಟೀಲ್, ರವೀಂದ್ರ ನರಸನಾಯಕ, ವೆಂಕಟರಡ್ಡಿ ಪಾಟೀಲ್, ಮರೆಣ್ಣ ಚಂಡು, ವಸಂತ ಸುರಪುರಕರ, ಹಣಮಂತ್ರಾಯ ಟಣಕೆದಾರ, ರವಿಕುಮಾರ ಯಕ್ಷಿಂತಿ, ಶರಣಪ್ಪ ಮುಂಡಾಸ, ಅಶೋಕ ನಾಯಕ, ಹಣಮಂತ ಯಕ್ಷಿಂತಿ, ಜಂಬಣ್ಣ ಮ್ಯಾಕಲದೊಡ್ಡಿ, ರಮೇಶ ಇಟಗಿ, ಎಸ್.ಎಂ. ಜಾನಿ, ಭೀಮಣ್ಣ ಸುರಪುರ, ಶ್ರೀಧರ, ಗೋಪಾಲ ಸುರಪುರ ಇತರರಿದ್ದರು.