ಹನಗೋಡು ಹೋಬಳಿಯ ಕಾಮಗೌಡನಹಳ್ಳಿ ಗ್ರಾಮದಲ್ಲಿ ರಸ್ತೆ ಮೆಟ್ಲಿಂಗ್ ಕಾಮಗಾರಿಗೆ ಶಾಸಕ ಎಚ್.ಪಿ.ಮಂಜುನಾಥ್ ಚಾಲನೆ ನೀಡಿದರು. ಮಂಚನಾಯಕ, ಬಸವಗೌಡ, ಈಶ್ವರ್, ರಾಜಶೇಖರ್, ಮಾದೇವಪ್ಪ ಇತರರು ಇದ್ದರು. 
ಜಿಲ್ಲೆ

ಗುಣಮಟ್ಟದ ಕಾಮಗಾರಿ ಬಗ್ಗೆ ಜಾಗೃತಿ ವಹಿಸಿ


ಹನಗೋಡು: ಗ್ರಾಮದಲ್ಲಿ ಕಾಮಗಾರಿ ನಡೆಸುವ ವೇಳೆ ಸಂಬಂಧಪಟ್ಟ ಇಂಜಿನಿಯರ್ ಸ್ಥಳದಲ್ಲೇ ಇದ್ದು, ಗುಣಮಟ್ಟದ ಬಗ್ಗೆ ಜಾಗ್ರತೆ ವಹಿಸಬೇಕೆಂದು ಶಾಸಕ ಎಚ್.ಪಿ.ಮಂಜುನಾಥ್ ಸೂಚನೆ ನೀಡಿದರು.

ಹನಗೋಡು ಹೋಬಳಿಯ ಕಾಮಗೌಡನಹಳ್ಳಿ ಗ್ರಾಮದಲ್ಲಿ ಜಿಪಂ ವತಿಯಿಂದ 20 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಮೆಟ್ಲಿಂಗ್ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿ ಅವರು, ಗ್ರಾಮದ ಜನತೆಯ ಬಹುದಿನದ ಬೇಡಿಕೆಯಂತೆ ಹಮ್ಮಿಗೆ ಮುಖ್ಯ ರಸ್ತೆಯಿಂದ ಕಾಮಗೌಡನಹಳ್ಳಿ ಸಂಪರ್ಕ ರಸ್ತೆ ಅಭಿವೃದ್ಧಿ ಬಗ್ಗೆ ನೀಡಿದ ಭರವಸೆಯಂತೆ, ಸರ್ಕಾರ ನೀಡಿರುವ ಅನುದಾನದಲ್ಲಿ ತಾಲೂಕಿನ ಎಲ್ಲ ಗ್ರಾಮಗಳಿಗೂ ಆದ್ಯತೆ ಮೇರೆಗೆ ಹಂಚಿಕೆ ಮಾಡಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಈ ಗ್ರಾಮದಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಜತೆಗೆ ಕನಕ ಭವನ, ಬಸವ ಭವನ ಹಾಗೂ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸಹಕರಿಸುವುದಾಗಿ ಭರವಸೆ ನೀಡಿದರು.

ಗ್ರಾಮದ ಮುಖಂಡ ಮಂಚನಾಯಕ ಮಾತನಾಡಿ, ಈ ಬಾರಿ ಶಾಸಕ ಮಂಜುನಾಥ್ ಗೆಲುವು ಸಾಧಿಸಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಸಚಿವರಾಗುವುದು ಖಚಿತ. ಇವರು ಸಚಿವರಾದರೆ ನಮ್ಮ ಗ್ರಾಮ ಸೇರಿದಂತೆ ಹುಣಸೂರು ತಾಲೂಕಿನ ಎಲ್ಲ ಗ್ರಾಮಗಳು ಅಭಿವೃದ್ಧಿಯಾಗಲಿದೆ ಎಂದರು.

ಗ್ರಾಪಂ ಸದಸ್ಯರಾದ ಈಶ್ವರ್ ಮಾದೇವ ನಾಯಕ, ಸಂತೋಷ್, ಆಶುಂಪಾಶ, ಗ್ರಾಮಸ್ಥರಾದ ಚಿಕ್ಕೇಗೌಡ, ಜವರನಾಯಕ, ಬಸವರಾಜ ನಾಯಕ, ಪುಟ್ಟೇಗೌಡ, ಬಸವೇಗೌಡ, ಅಂಗಡಿ ಮಾದೇವಪ್ಪ, ಬಸಪ್ಪ ದೇವರು, ಕುಚೇಲ ಶೆಟ್ಟಿ, ರಾಜಶೇಖರ್, ಆನಂದ, ಜಿಪಂ ಎಇಇ ನರಸಿಂಹಯ್ಯ, ಚಂದ್ರಕಾಂತ್, ಗುತ್ತಿಗೆದಾರ ಎಚ್.ವಿ.ಗಣೇಶ್ ಇತರರಿದ್ದರು.