ಬೋರಗಾಂವ: ಸರ್ಕಾರಿ ಯೋಜನೆಗಳನ್ನು ಕ್ಷೇತ್ರದ ಜನರಿಗೆ ತಲುಪಿಸುವಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸದಾ ಪ್ರವರ್ತಕರಾಗಿದ್ದಾರೆ. ಅವರಿಂದಾಗಿ ನಿಪ್ಪಾಣಿ ಅಭಿವೃದ್ಧಿ ವಿಷಯದಲ್ಲಿ ಮುಂದಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಶರದ ಜಂಗಟೆ ಹೇಳಿದರು.
ಪಟ್ಟಣದಲ್ಲಿ ಭಾನುವಾರ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಅಭಿವೃದ್ಧಿಯಲ್ಲಿ ನಿಪ್ಪಾಣಿಯನ್ನು ನಂ.೧ಮಾಡುವ ಉದ್ದೇಶ ಜೊಲ್ಲೆ ದಂಪತಿ ಹೊಂದಿದ್ದಾರೆ. ತಳವಾರ ಕೋಡಿಯ ಕನ್ನಡ ಶಾಲೆಯಲ್ಲಿ ಶೌಚಗೃಹ ನಿರ್ಮಾಣಕ್ಕೆ ೪ ಲಕ್ಷ ರೂ., ವಡ್ಡರ ಮಾಳ ಕನ್ನಡ ಶಾಲೆಯಲ್ಲಿ ಶೌಚಗೃಹ ನಿರ್ಮಾಣಕ್ಕೆ ೪ ಲಕ್ಷ ರೂ. ಮತ್ತು ಗಾಂಧಿ ಚೌಕ್‌ದಲ್ಲಿರುವ ರೇಣುಕಾ ಮಂದಿರ ಸಮುದಾಯ ಭವನಕ್ಕೆ ೫ ಲಕ್ಷ ರೂ. ಮಂಜೂರು ಆಗಿದೆ. ಗುತ್ತಿಗೆದಾರ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದು ತಿಳಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಬಿ.ಕೆ.ಮಹಾಜನ, ರಾಜಶೇಖರ ಹಿರೇಮಠ, ಜಿತು ಪಾಟೀಲ, ಅಜಿತ್ ತೇರದಾಳೆ, ಉತ್ತಮ ಕದಂ, ಶಿವಾಜಿ ಭೋರೆ, ಫಿರೋಜ್ ಅಫ್ರಾಜ, ಮಹಾದೇವ ಕಟ್ಟಿ, ಸುನೀಲ ಭೋರೆ, ಅಶೋಕ ಐವಳೆ, ಜಿನ್ನು ಭೋರೆ, ಅಜಿತ್ ಕಾಂಬಳೆ, ಅಜಿತ್ ಸವಾಡೆ, ಲಕ್ಷ್ಮಣ ವಾಸವಾಡೆ, ರಾಜು ಬಂಕಾಪುರೆ, ಅಭಯ ಕರೋಲೆ, ಸಂಜು ಚೌಗುಲೆ, ಜೈಪಾಲ ರೋಡ್ಡ, ಬಾಬು ಹವಲೆ, ವಿಜಯ ಹವಲೆ, ಮಹಾದೇವ ಮಡಿವಾಳ, ಭರತ ಕಾಂಬಳೆ, ಬಬನ ರೆಂದಾಳೆ, ಅಮಿತ ಮಾಳಿ, ರಾಜು ಲಟಲಟೆ, ಅಜಿತ್ ಲಟಲಟೆ ಇತರರಿದ್ದರು.