ನಿಪ್ಪಾಣಿ: ಗೃಹಭಾಗ್ಯ ಯೋಜನೆಯಡಿ ಪೌರ ಕಾರ್ಮಿಕರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ತಂದು ಅಂದಾಜು 2 ಎಕರೆ ಜಾಗದಲ್ಲಿ 86 ನಿವೇಶನ ಹಂಚಿಕೆ ಮಾಡಲಾಗಿತ್ತು.
ಅವುಗಳಲ್ಲಿ 46 ವಸತಿಗಳು ಪೂರ್ಣಗೊಂಡಿದೆ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು. ನಗರದಲ್ಲಿ ಭಾನುವಾರ ನಗರೋತ್ಥಾನದಡಿ ಪರಿಶಿಷ್ಟ ಜಾತಿಯ 1.65 ಕೋಟಿ ರೂ. ಅನುದಾನ, ಪರಿಶಿಷ್ಟ ಪಂಗಡದ 70.90 ಲಕ್ಷ ರೂ. ಅನುದಾನ, ಬಡಜನರ ಕಲ್ಯಾಣದ 92.44 ಲಕ್ಷ ರೂ. ಅನುದಾನ ಸೇರಿ ಒಟ್ಟು 3.28 ಕೋಟಿ ರೂ. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು ಎಂದರು.
ನಗರಸಭೆ ಅಧ್ಯಕ್ಷೆ ಸೋನಲ್ ಕೊಠಡಿಯಾ, ಉಪಾಧ್ಯಕ್ಷ ಸಂಜಯ ಸಾಂಗಾವಕರ, ಸ್ಥಾಯಿ ಸಮಿತಿ ಚೇರ್ಮನ್ ಡಾ. ಜಸರಾಜ ಗಿರೆ, ಸದಸ್ಯ ರಾಜೇಂದ್ರ ಗುಂದೇಶಾ, ವಿಲಾಸ ಗಾಡಿವಡ್ಡರ, ಜಯವಂತ ಭಾಟಲೆ, ಸುರೇಶ ದೇಸಾಯಿಸರ್ಕಾರ, ಸುಜಾತಾ ಕದಮ, ಪ್ರಭಾವತಿ ಸೂರ್ಯವಂಶಿ, ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ರಾಜೇಶ ಕೊಠಡಿಯಾ, ಬಂಡಾ ಘೋರ್ಪಡೆ, ಪ್ರಣವ ಮಾನವಿ ಇತರರಿದ್ದರು.