StartFragment
ಧಾರವಾಡ: ಜಿಲ್ಲೆಯಲ್ಲಿ ಶುಕ್ರವಾರ 219 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 7144ಕ್ಕೇರಿದೆ. 119 ಜನ ಬಿಡುಗಡೆಯಾಗಿದ್ದಾರೆ. ಇದರಿಂದ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 4528ಕ್ಕೆ ತಲುಪಿದೆ. ಇದರ ಅರ್ಧದಷ್ಟು, ಅಂದರೆ 2394 ಪ್ರಕರಣಗಳು ಸಕ್ರಿಯವಾಗಿವೆ. 36 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮತ್ತೆ 8 ಜನ ಮೃತಪಟ್ಟಿದ್ದಾರೆ. ಒಟ್ಟು ಸಾವಿನ ಸಂಖ್ಯೆ 222ಕ್ಕೆ ಏರಿದೆ.
ನಿತ್ಯವೂ ಪ್ರಕಟಗೊಳ್ಳುತ್ತಿದ್ದ ವರದಿಗಳಲ್ಲಿ ಹುಬ್ಬಳ್ಳಿಯಲ್ಲೇ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದರೆ, ಶುಕ್ರವಾರ ಪ್ರಕಟವಾದ ಪ್ರಕರಣಗಳಲ್ಲಿ ಧಾರವಾಡದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ.
ಹುಬ್ಬಳ್ಳಿ ನಗರ ಹಾಗೂ ಗ್ರಾಮಾಂತರ ಸೇರಿ ಸುಮಾರು 55 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದ್ದರೆ, ಧಾರವಾಡ ಶಹರ ಹಾಗೂ ಗ್ರಾಮಾಂತರ ಸೇರಿ ಅಂದಾಜು 60 ಪ್ರದೇಶಗಳಲ್ಲಿ ಪ್ರಕರಣಗಳು ಪತ್ತೆಯಾಗಿದೆ. ಕೆಲ ಪ್ರದೇಶಗಳಲ್ಲಿ ಒಂದಕ್ಕಿಂತಲೂ ಹೆಚ್ಚು ಪ್ರಕರಣಗಳು ಕಂಡು ಬಂದಿವೆ.
ಕಲಘಟಗಿ ತಾಲೂಕಿನ ಬೆಂಡಿಗೇರಿ ಓಣಿ, ದ್ಯಾಮವ್ವನ ಗುಡಿ ಓಣಿ, ಬಮ್ಮಿಗಟ್ಟಿ, ಗಳಗಿ ಹುಲಕೊಪ್ಪ, ಹೀರೆಹೊನ್ನಳ್ಳಿ, ಕುಂದಗೋಳದ ಗುಡಗೇರಿ ಪೊಲೀಸ್ ಠಾಣೆ, ಶಿರೂರ ಗ್ರಾಮ, ಬೆಟದೂರಿನ ಕೊಪ್ಪದವರ ಓಣಿ, ಸಿದ್ಧಾರೂಢ ನಗರ, ಸಂಶಿ ಗ್ರಾಮ, ಇನಾಮಕೊಪ್ಪ ಮಾದರ ಓಣಿ, ಕುಂದಗೋಳದ ಕಟಕರ್ ಓಣಿ, ಅಂಬೇಡ್ಕರ್ ನಗರ, ಗೌಡರ ಓಣಿ, ಗುಡೇನಕಟ್ಟಿ ಗ್ರಾಮ. ಹಿರೇಹರಕುಣಿ, ಬೆನಕನಹಳ್ಳಿ; ನವಲಗುಂದದ ನವಲಗುಂದ ಓಣಿ, ಶಲವಡಿ ಗ್ರಾಮ, ಬೆಳವಟಗಿ ಗ್ರಾಮ, ತಿರ್ಲಾಪುರ ಗ್ರಾಮ; ಅಣ್ಣಿಗೇರಿಯ ಕಬ್ಬೇರ್ ಪೇಟ, ಹೊಸಪೇಟ ಓಣಿ, ಮಣಕವಾಡ, ಶಿಶ್ವಿನಹಳ್ಳಿ ಗ್ರಾಮಗಳಲ್ಲಿ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಅನ್ಯ ಜಿಲ್ಲೆಗಳ ಐದಾರು ಪ್ರಕರಣಗಳು ಧಾರವಾಡ ಜಿಲ್ಲೆಯ ಆಸ್ಪತ್ರೆಗಳಿಗೆ ದಾಖಲಾಗಿವೆ.
EndFragment