ವಿಜಯವಾಣಿ ಸುದ್ದಿಜಾಲ ಹೊನ್ನಾವರ ತಾಲೂಕಿನ ಕೆಳಗಿನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಸರಕೊಂಡದಲ್ಲಿ ಗುಡ್ಡ ಕುಸಿತದ ಭೀತಿ ಉಂಟಾಗಿದ್ದು ಸ್ಥಳೀಯ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಈ ಭಾಗದಲ್ಲಿ ಗುಡ್ಡದ ಸಮೀಪ 64 ಕುಟುಂಬ ವಾಸ್ತವ್ಯ ಮಾಡಿಕೊಂಡಿವೆ. ಗುಡ್ಡದ ಮೇಲೆ ಬ್ರಹದಾಕಾರದ ಬಂಡೆಗಳಿದ್ದು ಅದರ ಕೆಳಗೆ ಇರುವ ನಿವಾಸಿಗಳಿಗೆ ಅಪಾಯವಿರುವುದರಿಂದ ಮುಂಜಾಗ್ರತಾ ಕ್ರಮವಾಗಿ 64 ಕುಟುಂಬಗಳ 270 ಜನರನ್ನು ಸಮೀಪದ ಅಪ್ಸರಕೊಂಡ ಮಠದಲ್ಲಿ ತಾಲುಯಕು ಆಡಳಿತದಿಂದ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ತಹಸೀಲ್ದಾರ್ ನಾಗರಾಜ್ ನಾಯ್ಕಡ, ಗಣಿ ಇಲಾಖೆ, ಕಂದಾಯ, ನೋಡಲ್ ಅಧಿಕಾರಿಗಳು, ಸ್ಥಳಿಯ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಒ ಭೇಟಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಹಿಂದೆ 2020 ರಲ್ಲಿ ಇಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ತೋಟಕ್ಕೆ ಮಣ್ಣು ಬಿದ್ದಿತ್ತು. ರಸ್ತೆಯ ಮೇಲೆ ಬೃಹತ್ ಬಂಡೆ ಉರುಳಿ ಸಂಚಾರ ಬಂದಾಗಿತ್ತು.