ಸಾಗರ/ಶಿಕಾರಿಪುರ: ಸಾಗರದಲ್ಲಿ ವೇಳೆಗೆ ಗುಡುಗು-ಸಿಡಿಲು ಸಹಿತ ಮಳೆಯಾಗಿದ್ದು, ಬಿಸಿಲ ತಾಪದಿಂದ ಕಂಗಾಲಾಗಿದ್ದ ಜನ ಸಂತಸಗೊಂಡರು. ಕಳೆದ ನಾಲ್ಕೈದು ದಿನಗಳಿಂದ ತಾಪಮಾನ ಹೆಚ್ಚಾಗಿ ಮನೆಯಿಂದ ಹೊರ ಬರಲು ಹಿಂದೆ-ಮುಂದೆ ನೋಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸುರಿದ ಮಳೆಯಿಂದ ವಾತಾವರಣ ಕೊಂಚ ತಂಪುಗೊಂಡಿದೆ.
ಆಲಿಕಲ್ಲು ಮಳೆ: ಶಿಕಾರಿಪುರ ತಾಲೂಕಿನ ತಾಳಗುಂದ ಹೋಬಳಿ ಸೇರಿದಂತೆ ತಾಲೂಕಿನ ವಿವಿಧೆಡೆಗಳಲ್ಲಿ ಶನಿವಾರ ಸಂಜೆ ಕೆಲ ಗಂಟೆ ನಿರಂತರವಾಗಿ ಗುಡುಗುಸಹಿತ ಮಳೆಯಾಯಿತು. ಕಳೆದ ವಾರ ಒಂದೆರಡು ಬಾರಿ ಮಳೆಯಾಗಿತ್ತು. ಇದೀಗ ಜೋರಾಗಿ ಮಳೆ ಬಂದಿರುವುದು ಕೃಷಿ ಕೆಲಸ, ತೋಟಗಳಿಗೆ ಅನುಕೂಲವಾಗಲಿದೆ. ಕೆಲವೆಡೆ ಕೆರೆಕಟ್ಟೆಗಳಿಗೆ ನೀರು ಸಲ್ಪ ತುಂಬಿದೆ. ತೊಗರ್ಸಿ ಭಾಗದಲ್ಲಿ ಆಲಿಕಲ್ಲು ಮಳೆಯಾಗಿದೆ. ಭಾನುವಾರದಿಂದ ಮತ್ತಷ್ಟು ಜೋರಾಗಿ ಮಳೆಯಾಗುವ ಸಾಧ್ಯತೆಯಿದೆ.