ಮೂಡಲಗಿ: ತಾಲೂಕಿನ ಕಲ್ಲೋಳಿಯಲ್ಲಿ ಬಸವ ಸಮಿತಿಯಿಂದ ಸರ್ವಧರ್ಮಗಳಿಂದ ಉಚಿತ ಗುಗ್ಗುಳೋತ್ಸವ ಕಾರ್ಯಕ್ರಮವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ರಾಮಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಗುಗುಳೋತ್ಸವಕ್ಕೆ ಸಮಿತಿ ಗೌರವಾಧ್ಯಕ್ಷ ಈರಪ್ಪ ಬೆಳಕೂಡ ಚಾಲನೆ ನೀಡಿದರು. 44ಕ್ಕೂ ಅಧಿಕ ದಂಪತಿ ಮತ್ತು ಕುಟುಂಬ ಸದಸ್ಯರು ಗುಗ್ಗುಳೋತ್ಸವದಲ್ಲಿ ಭಾಗಿಯಾಗಿದ್ದರು.
ಮುಖ್ಯ ಅತಿಥಿ ಗೋಕಾಕದ ಅಶೋಕ ಪೂಜೇರಿ ಮಾತನಾಡಿ, ಕಲ್ಲೋಳಿಯ ಬಸವ ಸಮಿತಿಯಿಂದ ಬಡ ಕುಟುಂಬಗಳ ಕಲ್ಯಾಣ ಕಾರ್ಯ ಮಾಡಿ ಸಾಮರಸ್ಯ ಹೆಚ್ಚಿಸೋಣ ಎಂದರು. ಕಲ್ಲೋಳಿ ಮತ್ತು ವಿವಿಧೆಡೆಯಿಂದ ಆಗಮಿಸಿದ್ದ ಪುರವಂತರು ಕಂಪಣ್ಣ ವಿಜಯನಗರ ನೇತೃತ್ವದಲ್ಲಿ ಒಡಪು ಹೇಳುತ್ತ ರೋಮಾಂಚನಗೊಳಿಸಿದರು.
ಅನ್ನದಾಸೋಹಿ ಕಲ್ಲಪ್ಪ ಕಡಾಡಿ, ಮೂಡಲಗಿಯ ಪ್ರಕಾಶ ಸೋನವಾಲಕರ, ಬಸವರಾಜ ದುಲಾಯಿ, ಬಾಲಶೇಖರ ಬಂದಿ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಬಸವ ಸಮಿತಿ ಸದಸ್ಯರಾದ ಗಿರಿಮಲ್ಲ ಸವಸುದ್ದಿ, ಮಹಾದೇವ ಖಾನಾಪುರ, ಕೃಷ್ಣಪ್ಪ ಮುಂಡಿಗನಾಳ, ವರಪ್ಪ ಮಟೆಗಾರ, ಅಕ್ಕನ ಬಳಗದ ಸದಸ್ಯರು, ಬಸವ ಸಮಿತಿ ಅಧ್ಯಕ್ಷ ರಮೇಶ ಬೆಳಕೂಡ, ಶಿಕ್ಷಕ ಪ್ರಕಾಶ ಗರಗಟ್ಟಿ , ಸಂಗಮೇಶ ಉಗಾರ ಇತರರಿದ್ದರು.