ಗುಂಡ್ಲುಪೇಟೆ ತಾಲೂಕಿಗೆ ಆಗಮಿಸಿದ ಮಹದೇಶ್ವರರ ರಥವನ್ನು ತೆರಕಣಾಂಬಿ ಹುಂಡಿ ಸಮೀಪ ಸ್ವಾಗತಿಸಿದ ನಿರಂಜನಕುಮಾರ್ ಮಾಲಾರ್ಪಣೆ ಮಾಡಿದರು. ರವಿಶಂಕರ್, ನಂಜಪ್ಪ, ಜಗದೀಶ್ ಇದ್ದಾರೆ. 
ಜಿಲ್ಲೆ

ಗುಂಡ್ಲುಪೇಟೆಗೆ ಮಹದೇಶ್ವರ ಜ್ಯೋತಿ ರಥ ಆಗಮನ

ಗುಂಡ್ಲುಪೇಟೆ: ಚಾಮರಾಜನಗರದಿಂದ ತಾಲೂಕಿಗೆ ಆಗಮಿಸಿದ ಶ್ರೀ ಮಹದೇಶ್ವರ ಜ್ಯೋತಿ ರಥವನ್ನು ಶಾಸಕ ಸಿ.ಎಸ್.ನಿರಂಜನಕುಮಾರ್ ನೇತೃತ್ವದಲ್ಲಿ ತೆರಕಣಾಂಬಿಹುಂಡಿ ಗ್ರಾಮದಲ್ಲಿ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು.

ಜಿಲ್ಲಾ ಕೇಂದ್ರದಿಂದ ಆಗಮಿಸಿದ ಬೆಳ್ಳಿರಥವನ್ನು ಗ್ರಾಮದ ಸಂಗನಬಸವೇಶ್ವರ ದೇವಸ್ಥಾನದ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ನಂದೀಶ್ ಮೂಡ್ಲುಪುರ, ಯು.ಎಂ.ಪ್ರಭುಸ್ವಾಮಿ, ಶಂಕರ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್ ತಾಲೂಕಿನ ಮುಖಂಡರಿಗೆ ಹಸ್ತಾಂತರಿಸಿದರು.

ಶಾಸಕ ಸಿ.ಎಸ್.ನಿರಂಜನಕುಮಾರ್, ತಹಸೀಲ್ದಾರ್ ರವಿಶಂಕರ್, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಚ್.ಎಸ್.ನಂಜಪ್ಪ ಉತ್ಸವಮೂರ್ತಿಗೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆಗೈದರು. ತೆರಕಣಾಂಬಿ, ಕಗ್ಗಳ, ಶಿಂಡನಪುರ, ಚಿಕ್ಕತುಪ್ಪೂರು, ಪಟ್ಟಣ, ಮಾಡ್ರಹಳ್ಳಿ, ಗರಗನಹಳ್ಳಿ, ರಾಘವಾಪುರ ಬೇಗೂರು ಹಾಗೂ ಹಿರೀಕಾಟಿವರೆಗೆ ದಾರಿಯುದ್ದಕ್ಕೂ ಸಾಗಿದ ರಥಕ್ಕೆ ಭಕ್ತರು ಪೂಜೆ ಸಲ್ಲಿಸಿ ಕಾಣಿಕೆ ಅರ್ಪಿಸಿದರು. ಪಟ್ಟಣದಲ್ಲಿ ಕಾಂಗ್ರೆಸ್ ಮುಖಂಡ ಎಚ್.ಎಂ.ಗಣೇಶ್‌ಪ್ರಸಾದ್, ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಮರಿಸ್ವಾಮಿ ಸ್ವಾಗತಿಸಿದರು.

ಗ್ರಾಮಪಂಚಾಯಿತಿ ಅಧ್ಯಕ್ಷೆ ರಾಜಮ್ಮ, ಸದಸ್ಯರಾದ ನಾರಾಯಣನಾಯ್ಕ, ಗೋವಿಂದನಾಯ್ಕ, ಪಿಡಿಒ ಮಹದೇವಸ್ವಾಮಿ, ಎಪಿಎಂಸಿ ನಿರ್ದೇಶಕ ಮಹೇಶ್, ತಾಪಂ ಇಒ ಅರಸು, ಮಾಜಿ ಸದಸ್ಯರಾದ ಮಹೇಶ್, ಪ್ರಭಾಕರ್, ನಾಡಕಚೇರಿಯ ಉಪತಹಸೀಲ್ದಾರ್ ನಾಗೇಶ್, ಹಾಪ್‌ಕಾಮ್ಸ್ ಜಿಲ್ಲಾಧ್ಯಕ್ಷ ಕೆ.ಆರ್.ಲೋಕೇಶ್, ಅಕ್ರಮ ಸಕ್ರಮ ಸಮಿತಿಯ ಉಪಾಧ್ಯಕ್ಷ ನಾಗರಾಜಪ್ಪ, ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ವಳವಳ್ಳಿ ಮಹೇಶ್, ಜಿಪಂ ಮಾಜಿ ಉಪಾಧ್ಯಕ್ಷ ಪಿ.ಮಹದೇವಪ್ಪ, ಬಿಜೆಪಿ ಮಂಡಲಾಧ್ಯಕ್ಷ ಡಿ.ಪಿ.ಜಗದೀಶ್, ಮುಖಂಡರಾದ ಎಲ್.ಸುರೇಶ್, ಗಂಗಪ್ಪ ಇದ್ದರು.