ಹಲಗೂರು: ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮಳವಳ್ಳಿ ತಾಲೂಕಿನ ಗೊಲ್ಲರಹಳ್ಳಿಯ ದಿವ್ಯಜ್ಯೋತಿ ಶಾಲೆಯ ವಿದ್ಯಾರ್ಥಿನಿ ಪಿ.ಭಾನವಿ ಗುಂಡು ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ.
ಎಸ್ಸೆಸ್ಸೆಲ್ಸಿಯಲ್ಲಿ ಓದುತ್ತಿರುವ ಈಕೆ ಗೊಲ್ಲರಹಳ್ಳಿ ಗ್ರಾಮದ ಪುಟ್ಟೇಗೌಡ ಮತ್ತು ಜಯಶೀಲಾ ಪುತ್ರಿ. ಮೈಸೂರು ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ, ಪಾಲಕರನ್ನು ಶಾಲೆ ವತಿಯಿಂದ ಸನ್ಮಾನಿಸಲಾಯಿತು.
ಫಾದರ್ ಜೋಸೆಫ್, ಫಾದರ್ ಜೋಶ್ ಕುಟ್ಟಿ, ಶಾಲೆಯ ವ್ಯವಸ್ಥಾಪಕರಾದ ಫಾದರ್ ಜಾಯ್, ಪ್ರಾಂಶುಪಾಲರಾದ ಫಾದರ್ ಬೋಬಿ ಜೋಸೆಫ್, ಸಿಸ್ಟರ್ ರೀನೆಟ್, ಸಿಬ್ಬಂದಿ ಇದ್ದರು.