ಹೊಂಡಕ್ಕೆ ಸಿಲುಕಿದ ಐರಾವತ ಬಸ್. 
ಜಿಲ್ಲೆ

ಗುಂಡಿಯಲ್ಲಿ ಬಸ್ ಸಿಲುಕಿ ಪರದಾಟ

ಸಕಲೇಶಪುರ: ಪಟ್ಟಣದ ಬಸ್ ನಿಲ್ದಾಣಕ್ಕೆ ತೆರಳುವ ಮಾರ್ಗದ ಗುಂಡಿಯಲ್ಲಿ ಸಿಲುಕಿದ ಐರಾವತ ಬಸ್‌ನ್ನು ಹೊರ ತೆಗೆಯಲು ಚಾಲಕ ಹಾಗೂ ನಿರ್ವಹಾಕ ಗಂಟೆಗಳ ಕಾಲ ಪರದಾಡಿದರು.

ಬುಧವಾರ ರಾತ್ರಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಐರಾವತ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದ ವೇಳೆ ಹೆದ್ದಾರಿಬದಿ ನಿರ್ಮಾಣವಾಗಿರುವ ದೊಡ್ಡ ಗುಂಡಿಯಲ್ಲಿ ಸಿಲುಕಿ ಒಂದು ಗಂಟೆಗೂ ಹೆಚ್ಚಿನ ಕಾಲ ಪರದಾಡುವಂತಾಗಿತ್ತು. ನೂರಾರು ಜನರು ಸೇರಿ ಬಸ್ ಅನ್ನು ಹಿಂಬದಿಯಿಂದ ತಳ್ಳಿ ಮೇಲೆ ತರುವ ಪ್ರಯತ್ನ ನಡೆಸಿದರೂ ಪ್ರಯೋಜವಾಗಲಿಲ್ಲ. ಅಂತಿಮವಾಗಿ ಜಾಕ್ ಬಳಸಿ ಬಸ್‌ನ್ನು ಗುಂಡಿಯಿಂದ ಹೊರತರಲಾಯಿತು.