ನರಗುಂದ: ಜಮ್ಮು ಕಾಶ್ಮೀರದ ಪಹಲ್ಗಾಮದಲ್ಲಿ ಉಗ್ರರಿಂದ ನಡೆದ ಗುಂಡಿನ ಭೀಕರ ದಾಳಿಯಲ್ಲಿ 28 ಅಮಾಯಕರು ಪ್ರಾಣ ತೆತ್ತಿದ್ದಾರೆ. 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಗುಂಡಿನ ದಾಳಿ ನಡೆಸಿದವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನರಗುಂದಲ್ಲಿ ರೈತ ಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಶಿರಸ್ತೇದಾರ ಸುನಂದಾ ಎಸ್ ಅವರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
500ರಿಂದ 600 ಭಾರತೀಯ ಪ್ರವಾಸಿಗಳು ಅಲ್ಲಿ ತಂಗಿದ್ದರು. ಭಾರತೀಯ ಅನೇಕರು ಇದರಲ್ಲಿ ಗುಂಡಿನ ದಾಳಿಗೆ ತುತ್ತಾಗುವ ಮೂಲಕ ಪ್ರಾಣ ಕಳೆದುಕೊಂಡಿದ್ದಾರೆ. ದೇಶದಲ್ಲಿ ಇಂತಹ ಭಯಾನಕ ವಾತಾವರಣ ಸೃಷ್ಟಿಸುತ್ತಿರುವ ಯಾರೇ ಆಗಲಿ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ವಿವಿಧ ಸಂಘಟನೆಗಳ ಪರ ಹೋರಾಟ ಸಮಿತಿ ಸದಸ್ಯ ರಾಘವೇಂದ್ರ ಗುಜಮಾಗಡಿ, ಚನ್ನು ನಂದಿ, ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಬಸ್ಸು ತಾವರೆ, ವಿಕಾಸ ಮುಧೋಳೆ, ಬಸವರಾಜ ಸತ್ತಿಗೇರಿ, ಶಿವಯೋಗಿ ಬೆಂಡಿಗೇರಿ, ಕರವೇ ತಾಲೂಕು ಘಟಕದ ಅಧ್ಯಕ್ಷ ನಬಿಸಾಬ ಕಿಲ್ಲೇದಾರ, ಶಂಕರಪ್ಪ ಜಾಲಗಾರ, ನಾಗರಾಜ ಜಾಲಗಾರ, ಶಂಕರಪ್ಪ ಗುದಗಿ ಇದ್ದರು.