ಶಿವರಂಜನ್ ಬೋಳನ್ನವರ ಚಿತ್ರನಟ 
ಜಿಲ್ಲೆ

ಗುಂಡಿನ ದಾಳಿ, ಓರ್ವ ಅರೆಸ್ಟ್


ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ಪಟ್ಟಣದ ನಿವಾಸಿ ಚಲನಚಿತ್ರ ನಟ ಶಿವರಂಜನ್ ಬೋಳನ್ನವರ ಮೇಲೆ ಮಂಗಳವಾರ ರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬುಧವಾರ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸಿದ್ದು, ಸಹೋದರ ಶ್ರೀಶೈಲ ಬೋಳಣ್ಣವರ ಅವರನ್ನು ಬಂಧಿಸಿದ್ದಾರೆ. ಆಸ್ತಿ ವಿವಾದ, ಹಣಕಾಸಿನ ವ್ಯವಹಾರವೇ ಚಲನಚಿತ್ರ ನಟ ಶಿವರಂಜನ್ ಬೋಳನ್ನವರ ಮೇಲಿನ ಗುಂಡಿನ ದಾಳಿಗೆ ಪ್ರಮುಖ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಹತ್ಯೆ ಯತ್ನಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ಘಟನೆ ವೇಳೆ ಸ್ಥಳದಲ್ಲಿ ಯಾರಿದ್ದರು ಮತ್ತು ಅವರ ಮೊಬೈಲ್ ನೆಟ್‌ವರ್ಕ್ ಮಾಹಿತಿ ಕಲೆ ಹಾಕುತ್ತಿದ್ದೇವೆ.

ಶಿವರಂಜನ್ ಬೋಳನ್ನವರ ಅವರು ನೀಡಿದ ದೂರಿದ ಆಧಾರದ ಮೇಲೆ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ನನ್ನ ಕಿರಿಯ ಸಹೋದರನ ಪತ್ನಿಯ ಅಕ್ಕನ ಮಗ, ಸಹೋದರರು ಸೇರಿಕೊಂಡು ಮಂಗಳವಾರ ರಾತ್ರಿ ನನ್ನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆದರೆ, ಜನರ, ದೇವರ ಆಶೀರ್ವಾದಿಂದ ಪ್ರಾಣಾಪಾಯದಿಂದ ಪಾರಾಗಿದ್ದೇನೆ. ದುಷ್ಕರ್ಮಿಗಳಿಗೆ ಬುದ್ಧಿಮಾತು ಹೇಳಿದ್ದಕ್ಕೆ ನನ್ನ ಮೇಲೆ ದಾಳಿ ನಡೆಸಿದ್ದಾರೆ. ಈಗಾಗಲೇ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಇನ್ನ್ನುಳಿದವರನ್ನು ಶೀಘ್ರ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.|ಶಿವರಂಜನ್ ಬೋಳನ್ನವರ ಚಿತ್ರನಟ