ಯಾದಗಿರಿ: ಪ್ರಕೃತಿ ಮತ್ತು ಪರಿಸರ ಉಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಒಟ್ಟು ೧೧.೫೦ ಕೋಟಿ ಸಸಿ ನೆಟ್ಟು ಅವುಗಳನ್ನು ಪೊಷಿಸಿ ಬೆಳೆಸುವ ಗುರಿ ರಾಜ್ಯ ಸರ್ಕಾರ ಮತ್ತು ಅರಣ್ಯ ಇಲಾಖೆ ಹೊಂದಿದೆ ಎಂದು ಅರಣ್ಯಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ಇಲ್ಲಿನ ಜಿ¯್ಲÁಧಿಕಾರಿ ಸಭಾಂಗಣದಲ್ಲಿ ಸೋಮವಾರ ಅರಣ್ಯ ಇಲಾಖೆ ಹಮ್ಮಿಕೊಂಡ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಈ ವರ್ಷ ಮೂರು ಕೋಟಿ ಸಸಿ ನೆಡಲಾಗುವುದು. ಅದರಲ್ಲಿ ಯಾದಗಿರಿ ಜಿ¯್ಲೆಯಲ್ಲಿ ೪ ಲP್ಷÀ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಅವುಗಳಲ್ಲಿ ಒಂದು ಲP್ಷÀ ಎತ್ತರದ ಸಸಿ ಹಚ್ಚಲಾಗುವುದು. ಇದು ಕೀಳಲು ಆಗುವುದಿಲ್ಲ ಮತ್ತು ಬಹುಕಾಲ ಬದುಕುತ್ತವೆ ಎಂದರು.
ನೆಟ್ಟ ಸಸಿಗಳನ್ನು ಪೊಷಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕೆಲಸ ಮಾಡುತ್ತದೆ. ಪ್ರಕೃತಿ ಮತ್ತು ಪರಿಸರ ಉಳಿದರೆ ಮಾತ್ರ ನಾವೆಲ್ಲರೂ ಉತ್ತಮವಾಗಿ ಬದುಕಿಳಿಯಲು ಸಾಧ್ಯ. ಇಂದಿನ ಹವಾಮಾನ ಮನುಕುಲದ ಉಳಿವಿಗೆ ತೊಂದರೆಯಾಗುತ್ತಿದೆ. ಗಿಡ-ಮರಗಳ ಮಾರಣಹೋಮದಿಂದ ಪರಿಸರ ನಾಶವಾಗಿ ಜೀವ, ಜಂತುಗಳು ಸಾಯುತ್ತಿವೆ. ಮರಗಳಿಂದ ಹೇರಳವಾದ ಆಕ್ಸಿಜನ್ ಸಿಗುತ್ತದೆ. ಇದರಿಂದ ಸಕಲ ಜೀವರಾಶಿಗಳು ಬದಕುಲು ಸಹಾಯವಾಗುತ್ತದೆ ಎಂದು ಹೇಳಿದರು.
ಹವಾಮಾನದಲ್ಲಿ ಸಾಕಷ್ಟು ವ್ಯತ್ಯಾಸವಾಗುತ್ತಿರುವುದರಿಂದ ಪ್ರಕೃತಿ ವಿಕೋಪ, ಗುಡ್ಡಗಳ ಕುಸಿತ, ಪ್ರವಾಹ, ತಾಪಮಾನ ಹೆಚ್ಚಾಗುವುದು ನಾವೆಲ್ಲರೂ ಕಾಣುತ್ತಿz್ದÉÃವೆ. ಇದರಿಂದ ಅಪಾರ ಜನರು ತಮ್ಮ ಜೀವ ಕಳೆದುಕೊಳ್ಳುತ್ತಿz್ದÁರೆ ಎಂದು ವಿಷಾದ ವ್ಯಕ್ತಪಡಿದಿರು.
ಅಧ್ಯP್ಷÀತೆ ವಹಿಸಿದ್ದ ಶಾಸಕ ಚನ್ನಾರಡ್ಡಿ ಪಾಟೀಲï ತುನ್ನೂರ ಮಾತನಾಡಿ, ಪರಿಸರ ಉಳುವಿಗೆ ಮತ್ತು ಗಿಡ-ಮರಗಳ ರP್ಷÀಣೆಗೆ ಸರ್ಕಾರ ಸಾಕಷ್ಟು ಅನುದಾನ ಖರ್ಚು ಮಾಡುತ್ತಿದೆ. ಕಾರಣ ನಾವೆಲ್ಲರೂ ಗಿಡ-ಮರಗಳನ್ನು ಹೆಚ್ಚು ಹೆಚ್ಚು ಬೆಳೆಸೋಣ ಎಂದು ಹೇಳಿದರು.
ಜಿ¯್ಲÁ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕ ರಾಜಾ ವೇಣುಗೋಪಾಲ ನಾಯಕ್, ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ, ಜಿ¯್ಲÁಧಿಕಾರಿ ಹರ್ಷಲï ಭೋಯರ್, ಎಸ್‌ಪಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಡಿಸಿ ರಮೇಶ ಕೋಲಾರ್, ಉಪ ಅರಣ್ಯ ಸಂರP್ಷÀಣಾಧಿಕಾರಿಗಳಾದ ಚೇತÀನ್ ಗಸ್ತಿ, ಸುಮೀತಕುಮಾರ ಪಾಟೀಲï, ಸಹಾಯಕ ಅರಣ್ಯ ಸಂರP್ಷÀಣಾಧಿಕಾರಿ ಮಹ್ಮದ್ ಅಸದ್ ಸೇರಿ ಇತರರಿದ್ದರು.
ಹಿರಿಯ ಕಲಾವಿದ ಚಂದ್ರಶೇಖರ ಗೋಗಿ ತಂಡದಿAದ ನಾಡಗೀತೆ ನಡೆಯಿತು. ಆರ್. ಜೆ.ಮಂಜು ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆ ಮಹಿಳೆಯರು, ವಿವಿಧ ಗಣ್ಯರು ಭಾಗವಹಿಸಿದ್ದರು.