ಜಿಲ್ಲೆ

ಗಿರಿ ಜಿಲ್ಲೆಗೆ ಸಿಗುವುದೇ ಎಂಎಲ್‌ಸಿ?

ಯಾದಗಿರಿ: ಕಲಬುರಗಿ ಬಸವನಗರದಿಂದ ರಾಷ್ಟç ರಾಜಧಾನಿ ದೆಹಲಿವರೆಗೂ ಮುಟ್ಟಲು ಕಾರಣವಾದ ಗಿರಿ ಜಿಲ್ಲೆಯ ಅರ್ಹ ಹಿರಿಯ ಕಾಂಗ್ರೆಸಿಗರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈಗಲಾದರೂ ವಿಧಾನ ಪರಿಷತ್‌ಗೆ ನೇಮಕ ಮಾಡುವರೆ ಎಂಬ ಚರ್ಚೆ ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ.

ನಾಲ್ಕು ಎಂಎಲ್‌ಸಿ ಸ್ಥಾನ ಖಾಲಿಯಾಗಿದ್ದು, ತಮಗೂ ಒಂದು ಅವಕಾಶ ಸಿಗಬಹುದು ಎಂಬ ಆಶಾಭಾವದಲ್ಲಿ ಜಿಲ್ಲೆಯ ಅನೇಕ ಹಿರಿಯ ನಾಯಕರಿದ್ದಾರೆ. ೨೦೨೪ರ ಜೂನ್‌ನಲ್ಲಿ ನಡೆದ ಮೇಲ್ಮನೆ ಸದಸ್ಯರ ನೇಮಕ ವೇಳೆ ಅವಕಾಶ ನಿರೀಕ್ಷಿಸಿದ್ದ ಗಿರಿ ಜಿ¯್ಲೆಯ ಅದರಲ್ಲೂ ವಿಶೇಷವಾಗಿ ಖರ್ಗೆ ಅವರಿಗೆ ರಾಜಕೀಯ ಜನ್ಮ ನೀಡಿದ ಗುರುಮಠಕಲ್ ವಿಧಾನಸಭಾ ಕ್ಷೇತ್ರದವರಿಗೆ ಸಿಗದೆ ಹತಾಶರಾಗಿ ಸುಮ್ಮನಾಗಿದ್ದರು.

ಆದರೆ ಪಕ್ಕದ ಕಲಬುರಗಿ ಹಾಗೂ ರಾಯಚೂರು ಜಿ¯್ಲÉಯವರಿಗೆ ಬಂಪರ್ ಅವಕಾಶ ಒಲಿದು ಬಂದಿತು. ಅಂತಯೇ ಕಲಬುರಗಿಯ ಜಗದೇವ ಗುತ್ತೇದಾರ್ ಹಾಗೂ ರಾಯಚೂರಿನ ಎನ್.ಎಸ್. ಬೋಸರಾಜು, ಎ.ವಸಂತಕುಮಾರ ಮತ್ತು ಬಳಿಕ ಬಸನಗೌಡ ಬಾದರ್ಲಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದರು. ಆಗ ಮುಂದಿನ ದಿನಗಳಲ್ಲಿ ನಿಮಗೆ ಅವಕಾಶ ಸಿಗಲಿದೆ ಎಂದು ಗಿರಿ ಜಿ¯್ಲÉ ನಾಯಕರಿಗೆ ವರಿಷ್ಠರು ಹೇಳಿದ್ದರು.

ಈಗ ಅಂತಹ ಅವಕಾಶ ಬಂದಿದೆ. ಪಕ್ಷದ ಅತ್ಯುನ್ನತ ಗದ್ದುಗೆ ಖರ್ಗೆ ಏರಲು ಕಾರಣ ಗುರುಮಠಕಲ್ ಕ್ಷೇತ್ರ. ಸುಮಾರು ಮೂರು ದಶಕ ಅವರನ್ನು ಹೆಗಲಮೇಲೆ ಹೊತ್ತು ಸೋಲಿಲ್ಲದ ಸರದಾರನಂತೆ ಗೆಲುವು ನೀಡಿದ ಕ್ಷೇತ್ರದ ನಮಗೆ ರಾಜ್ಯ ಮಟ್ಟದಲ್ಲಿ ಸರ್ಕಾರವನ್ನು ಪ್ರತಿನಿಸುವಂತಹ ಸ್ಥಾನಮಾನ ದೊರೆತಿಲ್ಲ ಎಂಬ ಕೊರಗು ಸ್ಥಳೀಯರನ್ನು ಕಾಡುತ್ತಿದೆ.

ಕಳೆದ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಗುರುಮಠಕಲï ಕ್ಷೇತ್ರದಲ್ಲಿ ಹಿನ್ನಡೆಯಾಗಿದ್ದು ಪP್ಷÀದ ಸಂಘಟನೆ ಮೇಲೂ ಪೆಟ್ಟು ಕೊಟ್ಟಿದೆ. ಕ್ಷೇತ್ರದವರಿಗೆ ರಾಜಕೀಯ ಅಧಿಕಾರ ನೀಡಿದರೆ ಸಂಘಟನೆಗೆ ಅನುಕೂಲವಾಗಲಿದೆ ಎಂಬುದು ಕಾಂಗ್ರೆಸಿಗರ ವಾದವಾಗಿದೆ.