ಜಿಲ್ಲೆ

ಗಿನ್ನಿಸ್ ದಾಖಲೆ ಬರೆದ ಹುಬ್ಬಳ್ಳಿ ರೈಲು ನಿಲ್ದಾಣದ ಪ್ಲಾಟ್​ಫಾಮ್ರ್

ಹುಬ್ಬಳ್ಳಿ : ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ (ಎಸ್​ಎಸ್​ಎಸ್) ರೈಲು ನಿಲ್ದಾಣದಲ್ಲಿರುವ 1,507 ಮೀ ಉದ್ದದ ಪ್ಲಾಟ್​ಫಾಮ್ರ್ ಗಿನ್ನಿಸ್ ವರ್ಲ್ಡ್ ರಿಕಾರ್ಡ್​ನಲ್ಲಿ ಸ್ಥಾನ ಪಡೆದಿದೆ.

ವಿಶ್ವದಲ್ಲಿಯೇ ಅತಿ ಉದ್ದನೇಯ ರೈಲ್ವೆ ಫ್ಲಾಟ್​ಫಾಮ್ರ್ ಇದಾಗಿದೆ. ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲು ನಿಲ್ದಾಣದಲ್ಲಿರುವ ಪ್ಲಾಟ್​ಫಾಮ್ರ್ ವಿಶ್ವದಲ್ಲಿಯೇ ಅತಿ ಉದ್ದನೇಯದ್ದು ಎಂಬುದನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರಿಕಾರ್ಡ್ ಮಾ. 2ರಂದು ಗುರುತಿಸಿದೆ.

ಮಾ. 12ರಂದು ಧಾರವಾಡದಲ್ಲಿ ನಡೆದ ಐಐಟಿ ಲೋಕಾರ್ಪಣೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ಲಾಟ್​ಫಾಮರ್್​ನಲ್ಲಿ ನಿಂತಿದ್ದ ಇಲೆಕ್ಟ್ರಿಕ್ ಇಂಜಿನ್ ಅಳವಡಿಸಿದ್ದ ಹುಬ್ಬಳ್ಳಿ - ದಾದರ ಎಕ್ಸ್​ಪ್ರೆಸ್ ಮತ್ತು ಬೆಳಗಾವಿ- ಸಿಕಂದರಾಬಾದ್ ಜಂಕ್ಷನ್ ಎಕ್ಸ್​ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು. ಆ ಮೂಲಕ ವಿಶ್ವದ ಅತಿ ಉದ್ದನೇಯ ರೈಲ್ವೆ ಪ್ಲಾಟ್​ಫಾಮ್ರ್ ಅನ್ನು ಲೋಕಾರ್ಪಣೆಗೊಳಿಸಿದರು.

ಈ ರೈಲು ನಿಲ್ದಾಣವನ್ನು 20.1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಗೊಳಿಸಲಾಗಿದೆ. ನಿಲ್ದಾಣದಲ್ಲಿ ಈ ಮೊದಲು ಇದ್ದ 5 ಪ್ಲಾಟ್​ಫಾಮರ್್​ಗಳನ್ನು 8ಕ್ಕೆ ಹೆಚ್ಚಿಸಲಾಗಿದೆ. ಇದರಲ್ಲಿರುವ ಮೊದಲ ಪ್ಲಾಟ್​ಫಾಮ್ರ್ ವಿಶ್ವದಾಖಲೆಯ ಖ್ಯಾತಿ ಹೊಂದಿದೆ.

ಈ ಮೊದಲು 550 ಮೀಟರ್ ಉದ್ದ ಇದ್ದ ನಿಲ್ದಾಣದಲ್ಲಿನ ಮೊದಲ ಪ್ಲಾಟ್​ಫಾಮ್ರ್ ಅನ್ನು 1,507 ಮೀಟರ್​ಗೆ ಹೆಚ್ಚಿಸಲಾಗಿದೆ. ಈಶಾನ್ಯ ರೈಲ್ವೆಯ ಪ್ರಧಾನ ಕಚೇರಿ ಹೊಂದಿರುವ ಉತ್ತರ ಪ್ರದೇಶದ ಗೋರಖಪುರದಲ್ಲಿದ್ದ 1,366 ಮೀಟರ್ ಉದ್ದದ ರೈಲ್ವೆ ಪ್ಲಾಟ್​ಫಾಮ್ರ್ ಈ ಮೊದಲು ವಿಶ್ವದ ದೊಡ್ಡ ಪ್ಲಾಟ್​ಫಾಮ್ರ್ ಎಂಬ ಹೆಗ್ಗಳಿಕೆ ಹೊಂದಿತ್ತು. ಇದೀಗ ಈ ಕೀರ್ತಿ ನೈಋತ್ಯ ರೈಲ್ವೆ ವಲಯದ ಪಾಲಾಗಿದೆ.

ಕೇರಳದ ಕೊಲ್ಲಂ ಜಂಕ್ಷನ್​ನ ಪ್ಲಾಟ್​ಫಾಮ್ರ್ 1,180.5 ಮೀಟರ್ ಉದ್ದ ಹಾಗೂ ಪಶ್ಚಿಮ ಬಂಗಾಳದ ಖರಗ್​ಪುರ ನಿಲ್ದಾಣದ ಪ್ಲಾಟ್​ಫಾಮ್ರ್ 1,072 ಮೀಟರ್ ಉದ್ದ ಇವೆ.

ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ನಿಲ್ದಾಣದ ಈ ಪ್ಲಾಟ್​ಫಾಮ್ರ್ ಉದ್ದ ಹೆಚ್ಚಿಸುವ ಕಾಮಗಾರಿ ಕೋವಿಡ್ ಕಾರಣದಿಂದಾಗಿ ತಡವಾಗಿ ಪೂರ್ಣಗೊಂಡಿತು.

ಈ ರೈಲು ನಿಲ್ದಾಣ ಮೂರು ಪ್ರವೇಶದ್ವಾರಗಳನ್ನು ಹೊಂದಿದೆ. ನಿಲ್ದಾಣದ ಎರಡನೇ ಪ್ರವೇಶದ್ವಾರದ ಪಕ್ಕದಲ್ಲಿ ರೈಲ್ವೆ ಮ್ಯೂಸಿಯಂ ಸಹ ನಿರ್ವಣಗೊಂಡಿದೆ.