ಜಿಲ್ಲೆ

ಗಿಣಿಗೇರಾದಲ್ಲಿ‌ ಗಿಡ ನೆಟ್ಟ ಅಧಿಕಾರಿಗಳು

ಕೊಪ್ಪಳ:ಪ್ರತಿಯೊಬ್ಬರಿಗೂ ನಮ್ಮ ನೆಲ, ನಮ್ಮ ದೇಶ ಎನ್ನುವ ಸಾಮಾಜಿಕ ಕಳಕಳಿ ಮುಖ್ಯ ಎಂದು ತಾಪಂ ಇಒ ದುಂಡಪ್ಪ ತುರಾದಿ ಹೇಳಿದರು.


ತಾಲೂಕಿನ ಗಿಣಿಗೇರಿ ಕೆರೆ ದಡದಲ್ಲಿ ನಮ್ಮ ನೆಲ, ನಮ್ಮ ದೇಶ ಕಾರ್ಯಕ್ರಮದಡಿ ಬುಧವಾರ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.


ಸ್ವಾತಂತ್ರೃ ದಿನದ ಅಂಗವಾಗಿ ಆ.9ರಿಂದ 15ವರೆಗೆ ಗ್ರಾಪಂ ಮಟ್ಟದಲ್ಲಿ ಅಮೃತ ಮಹೋತ್ಸವ, ಅರಣ್ಯ ಇಲಾಖೆ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿಯೊಬ್ಬರು ದೇಶ ಪ್ರೇ, ಪರಿಸರ ಹಾಳಜಿ ಹೊಂದಬೇಕು. ಸಾಧ್ಯವಾದಷ್ಟು ಗಿಡ, ಮರಗಳನ್ನು ಬೆಳೆಸಬೇಕು. ಪರಿಸರ ಕಾಳಜಿ ಮೆರೆಯಬೇಕು. ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಬೇಕೆಂದು ತಿಳಿಸಿದರು.


ತಾಪಂ ನರೇಗಾ ಸಹಾಯಕ ನಿರ್ದೇಶಕಿ ಸೌಮ್ಯ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುರುನಗೌಡ, ಗ್ರಾಪಂ ಉಪಾಧ್ಯಕ್ಷ ಕರಿಯಪ್ಪ ಮೇಟಿ, ಉಪವಲಯ ಅರಣ್ಯಾಧಿಕಾರಿಗಳಾದ ಎಂ.ಉಮೇಶ, ಅಬ್ದುಲ್ ಸಮಿ, ಅರಣ್ಯ ಗಸ್ತು ಪಾಲಕ ಖಾಜಾ ಅತ್ತಾರ, ಪಿಡಿಒ ಮಂಜುಳಾದೇವಿ ಹೂಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಂತ್ರಿಕ ಸಂಯೋಜಕ ಯಮನೂರಪ್ಪ, ಕಾರ್ಯದರ್ಶಿ ಮಂಜುನಾಥ, ರವಿಕುಮಾರ ಹಲಗೇರಿ, ಗ್ರಾಮಸ್ಥರಾದ ನೀಲಪ್ಪ ಮೂರುಮನೆ, ಹನಮೇಶ್ ನಾಯಕ ಇತರರಿದ್ದರು.