ಶನಿವಾರಸಂತೆ : ರೋಟರಿ ಮಲ್ಲೇಶ್ವರ ಆಲೂರು ಸಿದ್ದಾಪುರ ವತಿಯಿಂದ ರೋಟರಿ ಸಂಸ್ಥೆಯ ವನಮಹೋತ್ಸವ ಯೋಜನೆಯಡಿ ಸಮೀಪದ ಬಾಣವಾರ ಅರಣ್ಯ ಉಪವಲಯ ಕಚೇರಿಯಲ್ಲಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರೋಟರಿ ಮಲ್ಲೇಶ್ವರ ಆಲೂರು ಸಿದ್ದಾಪುರ ಸಂಸ್ಥೆ ಅಧ್ಯಕ್ಷ ಉದಯ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ರೋಟರಿ ಸಂಸ್ಥೆ ಸಮಾಜ ಸೇವೆ, ಸಾಮಾಜಿಕ ಜಾಗೃತಿ ಮೂಡಿಸುವ ಜತೆಗೆ ಅರಣ್ಯ, ಪರಿಸರ, ಆರೋಗ್ಯ, ಶಿಕ್ಷಣ ಕ್ಷೇತ್ರದ ಪ್ರಗತಿಗಾಗಿ ಸರ್ಕಾರದ ಜೊತೆಗೆ ಕೈಜೋಡಿಸುತ್ತಿದೆ ಎಂದರು.
ರೋಟರಿ ಕ್ಲಬ್ ಕಾರ್ಯದರ್ಶಿ ಸಂಪತ್, ಸದಸ್ಯರಾದ ಜಿ.ಎಂ.ಹೇಮಂತ್, ಪ್ರಕಾಶ್, ಎಂ.ಇ.ವೆಂಕಟೇಶ್, ಉಪ ವಲಯ ಅರಣ್ಯಾಧಿಕಾರಿ ರಾಕೇಶ್, ಅರಣ್ಯ ರಕ್ಷಕರಾದ ಪ್ರಕಾಶ್, ಪ್ರಸಾದ್, ಸದಾನಂದ ಹಿಪ್ಪರಗಿ, ಅರಣ್ಯ ಇಲಾಖೆ ಸಿಬ್ಬಂದಿ ಸತೀಶ್ ಗೌಡ, ಚಟ್ಯಪ್ಪ, ಪ್ರವೀಣ್, ಧರ್ಮ, ವಿಕಾಸ್ ಮುಂತಾದವರು ಇದ್ದರು.