ಮೂಡಿಗೆರೆ ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಗಿಡಗಳನ್ನು ನೀಡಲಾಯಿತು. ಎಂ.ಎಸ್.ಅನಂತ್, ರತನ್ ಊರುಬಗೆ, ಚೇತನ್‌ಕುಮಾರ್, ಜಗದೀಶ್ ನಾಯಕ್, ಅಶ್ವತ್ಥ್ ಇತರರಿದ್ದರು. 
ಜಿಲ್ಲೆ

ಗಿಡ ನೆಟ್ಟು ಪರಿಸರ ಕಾಪಾಡಿ

ಮೂಡಿಗೆರೆ: ಪ್ರತಿಯೊಬ್ಬರೂ ಮನೆ, ಕಚೇರಿ, ಶಾಲೆ, ಪ್ರಾರ್ಥನಾ ಮಂದಿರ ಸುತ್ತಮುತ್ತ ಗಿಡ ನೆಡಬೇಕು. ಹಾಗಾದರೆ ಮಾತ್ರ ಮಲೆನಾಡು ಹಸಿರಿನಿಂದಲೇ ಕೂಡಿರುತ್ತದೆ ಎಂದು ಜಿಪಂ ಮಾಜಿ ಸದಸ್ಯ ಎಂ.ಎಸ್.ಅನಂತ್ ಹೇಳಿದರು.

ಹಸಿರು ಫೌಂಡೇಶನ್‌ನಿಂದ ಪಟ್ಟಣದ ಪ್ರವಾಸಿ ಮಂದಿರ ಮತ್ತು ಜೂನಿಯರ್ ಕಾಲೇಜ್ ಪ್ರೌಢಶಾಲೆ ವಿಭಾಗದ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಗಿಡ ನೆಟ್ಟು ಮಾತನಾಡಿ, ಮಲೆನಾಡು ಬಯಲುಸೀಮೆಯಾಗುವುದನ್ನು ತಡೆಗಟ್ಟಬೇಕು ಎಂದು ತಿಳಿಸಿದರು.

ಹಸಿರು ಫೌಂಡೇಶನ್ ಅಧ್ಯಕ್ಷ ರತನ್ ಊರುಬಗೆ ಮಾತನಾಡಿ, ಎಲ್ಲ ಕಡೆ ಮರ, ಗಿಡಗಳನ್ನು ಕತ್ತರಿಸಿ ಕಾಂಕ್ರೀಟ್ ಕಟ್ಟಡದ ಕಾಡು ಬೆಳೆಸಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಕಾಫಿ ತೋಟ ಇರುವ ಕಾರಣ ಇನ್ನೂ ಮಲೆನಾಡಾಗಿ ಉಳಿದಿದೆ. ಕಾಡು ಕಡಿದು ಜಾಗ ಸಮತಟ್ಟುಮಾಡಿ ಕಟ್ಟಡ ನಿರ್ಮಿಸುತ್ತಿರುವ ಕಾರಣ ಗುಡ್ಡ ಕುಸಿತ ಸಂಭವಿಸುತ್ತಿವೆ. ಪರಿಸರವನ್ನು ಉಳಿಸುವ ಸಲುವಾಗಿ ಸಂಘ-ಸಂಸ್ಥೆಗಳು ವರ್ಷದಲ್ಲಿ ಒಂದು ತಿಂಗಳು ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಶಾಲೆ, ಗ್ರಂಥಾಲಯ, ಸರ್ಕಾರಿ ಕಚೇರಿ ಸುತ್ತಮುತ್ತ ಗಿಡಗಳನ್ನು ಬೆಳೆಸಿದರೆ ಎಲ್ಲ ಕಡೆ ಹಸಿರು ತುಂಬಿಕೊಳ್ಳುತ್ತದೆ ಎಂದು ತಿಳಿಸಿದರು.

ಅರಣ್ಯ ಇಲಾಖೆ ಅಧಿಕಾರಿ ಚೇತನ್‌ಕುಮಾರ್, ಪ್ರಾಚಾರ್ಯ ಜಗದೀಶ್ ನಾಯಕ್, ಅಶ್ವತ್ಥ್, ಅಭಿಜಿತ್ ಹೆಡದಾಳು, ಜಯಂತ್, ಶೋಧನ್, ಸಚಿನ್, ಅಖಿಲೇಶ್, ಶರತ್, ಕವನ್, ಪೂರ್ಣೇಶ್, ಶರತ್ ಬಿನ್ನಡಿ ಇತರರಿದ್ದರು.