ಬೀರೂರು ಸಮೀಪದ ಹುಲ್ಲೇಹಳ್ಳಿ ತೋಟದಲ್ಲಿ ಗಾಳಿಗೆ ಬಾಳೆ ಗಿಡಗಳು ಮುರಿದು ಬಿದ್ದಿರುವುದು. 
ಜಿಲ್ಲೆ

ಗಾಳಿಗೆ ಮುರಿದು ಬಿದ್ದ ಬಾಳೆ ಗಿಡಗಳು

ಬೀರೂರು: ಪಟ್ಟಣ ಹಾಗೂ ಸುತ್ತಮುತ್ತ ಭಾನುವಾರ ಒಂದು ತಾಸಿಗೂ ಹೆಚ್ಚು ಕಾಲ ಗಾಳಿಸಹಿತ ಮಳೆಯಾಯಿತು.

ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ಜನರಿಗೆ ಮಳೆಯಿಂದ ಆಹ್ಲಾದಕರವೆನಿಸಿತು. ಜೋರಾಗಿ ಗಾಳಿ ಬೀಸಿದ್ದರಿಂದ ಹುಲ್ಲೇಹಳ್ಳಿ ಗ್ರಾಮದ ರಾಜಪ್ಪ ಎಂಬುವರ ಬಾಳೆ ತೋಟದ 300ಕ್ಕೂ ಹೆಚ್ಚು ಬಾಳೆ ಗಿಡಗಳು ಮುರಿದು ಬಿದ್ದಿವೆ. ಇನ್ನು ಅಡಕೆ ಮತ್ತು ತೆಂಗಿನ ತೋಟಕ್ಕೆ ಮಳೆ ತಂಪೆರೆದಿದ್ದು ರೈತರು ಸಂತಸಗೊಂಡಿದ್ದಾರೆ.