ಜಿಲ್ಲೆ

ಗಾಳಿ- ಮಳೆಗೆ ಬಾಳೆ ಸಂಪೂರ್ಣ ನಾಶ

ನಂಜನಗೂಡು: ತಾಲೂಕಿನ ಶಿರಮಳ್ಳಿ ಗ್ರಾಮದಲ್ಲಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಬಾಳೆ ಬೆಳೆ ಸಂಪೂರ್ಣವಾಗಿ ನಾಶವಾಗಿದೆ.


ಗ್ರಾಮದ ಭೋಗನಂಜಪ್ಪ ಮತ್ತು ಜಯಮ್ಮ ಎಂಬುವರ ಸುಮಾರು 5 ಎಕರೆ ಪ್ರದೇಶದಲ್ಲಿ ಮೂರು ಸಾವಿರ ಬಾಳೆ ಗಿಡಗಳು ನೆಲ ಕಚ್ಚಿವೆ. ಬಾಳೆ ಗೊನೆಗಳು ರೈತರ ಕೈಸೇರುವ ಮುನ್ನ ಮಣ್ಣುಪಾಲಾಗಿವೆ. ಇದರಿಂದಾಗಿ ಸಂತ್ರಸ್ತ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.