ಕಲಬುರಗಿ: ಗಾರ್ನಿಯರ್ ಕಂಪನಿಯಿAದ ವಿಜಯವಾಣಿ ಸಹಯೋಗದಲ್ಲಿ ನಗರದ ವಿವಿಧೆಡೆ ಶುಕ್ರವಾರ ಏರ್ಪಡಿಸಿದ್ದ ಉಚಿತ ಹೇರ್ ಡೈ (ಕಲರಿಂಗ್) ಅಭಿಯಾನಕ್ಕೆ ಅಭೂತಪೂರ್ವ ಸ್ಪಂದನೆ ದೊರಕಿದ್ದು, ನೂರಾರು ಜನರು ಸ್ವಯಂ ಪ್ರೇರಿತವಾಗಿ ಹೇರ್ ಡೈ ಅಭಿಯಾನದಲ್ಲಿ ಪಾಲ್ಗೊಂಡರು.
ನಗರದ ಹೈಕೋರ್ಟ್ ಬಳಿಯ ಗ್ರೀನ್ ಪಾರ್ಕ್ ಎದುರಿನ ಗಣೇಶ ಅಪಾರ್ಟ್ಟ್ಮೆಂಟ್ ಹತ್ತಿರ, ಗೋದುತಾಯಿ ಕಾಲೇಜಿನ ಬಳಿ ನಡೆದ ಹೇರ್ ಕಲರಿಂಗ್ ಅಭಿಯಾನದಲ್ಲಿ ಮಹಿಳೆಯರು, ಪುರುಷರು, ಯುವತಿಯರು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರು ಸ್ವಯಂ ಪ್ರೇರಿತರಾಗಿ ಆಗಮಿಸಿ, ಹೇರ್‌ಡೈ ಮಾಡಿಸಿಕೊಂಡರು.
ಗಾರ್ನಿಯರ್ ಕಂಪನಿಯ ಸುಸ್ಸಜ್ಜಿತ ಹವಾನಿಯಂತ್ರಿತ ವಾಹನದಲ್ಲಿ ಕಂಪನಿಯ ನುರಿತ ಹೇರ್‌ಡೈ ತಜ್ಞರು ಜನರಿಗೆ ಉಚಿತವಾಗಿ ಹೇರ್ ಡೈ ಮಾಡಿದರು. ಗಾರ್ನಿಯರ್ ಸಂಸ್ಥೆಯ ಪರಿಣಿತ ಸಿಬ್ಬಂದಿ ಗಾರ್ನಿಯರ್ ಹೇರ್‌ಡೈಗಳ ಕುರಿತು ಮಾಹಿತಿ ನೀಡಿದರು. ವಾಹನ ನಿಲ್ಲಿಸಿದ ಬಡಾವಣೆಯಲ್ಲಿ ಸುತ್ತಲಿನ ಜನರು ಆಗಮಿಸಿ, ಸರತಿಯಲ್ಲಿ ನಿಂತು ಖುಷಿಯಿಂದ ಅಭಿಯಾನದಲ್ಲಿ ಪಾಲ್ಗೊಂಡು ಬೇರೆ ಬೇರೆ ಬಣ್ಣದ ಹೇರ್ ಡೈ ಮಾಡಿಸಿಕೊಂಡರು. ಪ್ರತಿಯೊಬ್ಬರಿಗೆ ಕನಿಷ್ಠ ೧೫ರಿಂದ ೨೫ ನಿಮಿಷದವರಿಗೆ ಹೇರ್ ಡೈ ಮಾಡಲಾಯಿತು.
ಕಾಶಿಕಮಲ್ ಬಳಿ ಇಂದು ಅಭಿಯಾನ: ನಗರದ ಹೈಕೋರ್ಟ್ ಬಳಿಯ ಕಾಶಿ ಕಮಲ್ ಅಪಾರ್ಟ್ಮೆಂಟ್ ಬಳಿ ಬೆಳಗ್ಗೆ ೮ಗಂಟೆಗೆ ಹೇರ್ ಡೈ ಅಭಿಯಾನ ನಡೆಯಲಿದೆ. ಮಾಹಿತಿಗೆ ೮೮೮೪೪೩೨೪೨೪, ೮೮೮೪೪೩೨೪೨೩ ಸಂಖ್ಯೆಗೆ ಸಂಪರ್ಕಿಸಿ.