ಬೆಳಗಾವಿ: ಡಾ.ಬೆಟಗೇರಿ ಕೃಷ್ಣಶರ್ಮ ಅವರ ರಚಿಸಿದ ಗಾಯನ ಸ್ಪರ್ಧೆಯನ್ನು ಜಿಲ್ಲಾಮಟ್ಟ ಅಥವಾ ವಿಶ್ವವಿದ್ಯಾಲಯ ಮಟ್ಟದಲ್ಲಿ ಯಾವುದೇ ಕಾಲೇಜಿನ ಟ್ರಸ್ಟ್ ಸಹಯೋಗದೊಂದಿಗೆ ಏರ್ಪಡಿಸಬಹುದು. ಪ್ರಥಮ 5 ಸಾವಿರ ರೂ., ದ್ವಿತೀಯ 3 ಸಾವಿರ ರೂ. ಮತ್ತು ತೃತೀಯ 2 ಸಾವಿರ ರೂ. ಬಹುಮಾನ ನೀಡಲಾಗುವುದು.
ಡಾ.ಬೆಟಗೇರಿ ಕೃಷ್ಣಶರ್ಮ ಅವರ ಸಾಹಿತ್ಯವನ್ನು ಪಿಯುಸಿ, ಹೈಸ್ಕೂಲ್ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಡಾ.ಬೆಟಗೇರಿ ಕೃಷ್ಣಶರ್ಮ ಕಾವ್ಯ ಗಾಯನ ಕಾರ್ಯಕ್ರಮ ಆಯೋಜಿಸಲು ಕೋರಲಾಗಿದೆ. ಕಾಲೇಜು ವಿಶ್ವವಿದ್ಯಾಲಯ ವಿಭಾಗ ಡಾ.ಬೆಟಗೇರಿ ಕೃಷ್ಣಶರ್ಮ ಅವರ ಹಾಡು ಹಾಡುವ ಕಲಾ ತಂಡಕ್ಕೆ 10 ಸಾವಿರ ರೂ. ಟ್ರಸ್ಟ್ ವತಿಯಿಂದ ನೀಡಲಾಗುವುದು.
ಅರ್ಜಿಗಳನ್ನು ಅಧ್ಯಕ್ಷರು, ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್, ಸಾಂಸ್ಕೃತಿಕ ಸಮುಚ್ಛಯ ಭವನ, ಸುಭಾಷ ನಗರ ಬೆಳಗಾವಿ-590016ಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಚಿಝ್ಟಜಿಜ್ಞಚ್ಟಞಠ್ಟ್ಠಿಠಿಃಜಞಜ್ಝಿ.್ಚಟಞ ಇ-ಮೇಲ್ ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.