ಜಿಲ್ಲೆ

ಗಾಯಗೊಂಡಿದ್ದ ಕೆರೆ ಹಾವಿಗೆ ಚಿಕಿತ್ಸೆ

ಚಾಮರಾಜನಗರ: ತಾಲೂಕಿನ ಕೆಲ್ಲಂಬಳ್ಳಿ ಗ್ರಾಮದಲ್ಲಿ ಮನೆ ನಿರ್ಮಾಣದ ವೇಳೆ ಅಡಿಪಾಯ ತೆಗೆಯುವಾಗ ಕಬ್ಬಿಣದ ಸರಳಿನಿಂದ ಪೆಟ್ಟುಬಿದ್ದು ಗಾಯಗೊಂಡಿದ್ದ ಕೆರೆ ಹಾವನ್ನು ರಕ್ಷಣೆ ಮಾಡಲಾಗಿದೆ.

ಗ್ರಾಮದಲ್ಲಿ ಮನೆ ನಿರ್ಮಾಣಕ್ಕೆ ಅಡಿಪಾಯ ತೆಗೆಯುವಾಗ ಕಬ್ಬಿಣದ ಸರಳು ತಗುಲಿ ಕೆರೆ ಹಾವು ಗಾಯಗೊಂಡಿತ್ತು. ಈ ಸಂಬಂಧ ಉತ್ತವಳ್ಳಿಯ ಸ್ನೇಕ್ ಸುರೇಶ್‌ಗೆ ವಿಷಯ ತಿಳಿಸಲಾಗಿದ್ದು, ಸ್ಥಳಕ್ಕೆ ಬಂದ ಸ್ನೇಕ್ ಸುರೇಶ್ ಅವರು ಗಾಯಗೊಂಡಿದ್ದ ಕೆರೆ ಹಾವನ್ನು ರಕ್ಷಣೆ ಮಾಡಿ ಬಳಿಕ ಚಾಮರಾಜನಗರದಲ್ಲಿರುವ ಪಶುಪಾಲನಾ ಪಾಲಿ ಕ್ಲಿನಿಕ್‌ಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ. ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಮೂರ್ತಿ ಅವರು ಹಾವಿಗೆ ಸೂಕ್ತ ಚಿಕಿತ್ಸೆ ನೀಡಿದ್ದು. ಚೇತರಿಸಿಕೊಂಡ ಬಳಿಕ ಕಾಡಿಗೆ ಬಿಡಲಾಗಿದೆ.