ಕಲಬುರಗಿ: ಜಿಲ್ಲಾ ಗಾಣಿಗ ನೌಕರರ ಕಲ್ಯಾಣ ಸಂಘದಿAದ ನಗರದ ಕರುಣೇಶ್ವರ ನಗರದಲ್ಲಿನ ಕೆಇಬಿ ಭವನದಲ್ಲಿ ಸೆ.೧೫ರಂದು ಗಾಣಿಗ ಸಮಾಜದ ಪ್ರತಿಭಾವಂತ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ್ ತಿಳಿಸಿದರು.
ಕಳೆದ ಹಲವು ವರ್ಷದಿಂದ ಪ್ರತಿಬಾ ಪುರಸ್ಕಾರವನ್ನು ಮಾಡುತ್ತ ಬಂದಿದ್ದು, ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಪ್ರಸಕ್ತ ವರ್ಷವೂ ಶೇ.೮೫ಕ್ಕಿಂತ ಹೆಚ್ಚು ಅಂಕವಿದ್ದ ಎಸ್ಸೆಸ್ಸೆಲ್ಸಿ, ಶೇ.೯೦ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುತ್ತದೆ. ಕಾರ್ಯಕ್ರಮದ ಮುನ್ನಾ ದಿನದವರೆಗೂ ಮಾಹಿತಿ ನೀಡಿದರೂ, ಸನ್ಮಾನ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನೌಕರರ ಸಂಘದ ಸದಸ್ಯರಾಗಿದ್ದ, ನಿವೃತ್ತ ನೌಕರರನ್ನು ಸನ್ಮಾನಿಸಲಾಗುತ್ತದೆ. ಮುಂದಿನ ವರ್ಷದಿಂದ ಬೇರೆ ಸಮಾಜದ ಐವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ಪ್ರತಿಭಾ ಪುರಸ್ಕೃತರಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದು ಹೇಳಿದರು.
ಶ್ರೀ ಡಾ.ಜಯಬಸವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶ್ರೀ ಶಂಕರಾನAದ ಸ್ವಾಮೀಜಿ, ಶ್ರೀ ಪ್ರಭುಲಿಂಗ ದೇವರು ಉದ್ಘಾಟಿಸಲಿದ್ದಾರೆ. ಐಎಎಸ್ ಅಧಿಕಾರಿ ಕವಿತಾ ಮನ್ನಿಕೇರಿ ಪ್ರತಿಭಾ ಪುರಸ್ಕಾರ ನಡೆಸಿಕೊಡಲಿದ್ದಾರೆ. ಸಂಗನಗೌಡ ಪಾಟೀಲ್ ಕಲ್ಲೂರ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಎಂ.ಡಿ.ಪಾಟೀಲ್, ಮಲ್ಲಿಕಾರ್ಜುನ ತೊದಲಬಾವಿ ಭಾಗವಹಿಸಲಿದ್ದಾರೆ.
ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಡಾ.ಆರ್.ಆರ್.ಬಿರಾದಾರ, ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಸುನೀಲ ಬಾವಿಕಟ್ಟಿ ಉಪನ್ಯಾಸ ನೀಡಲಿದ್ದಾರೆ. ಶರಣು ಬಿಲ್ಲಾಡ, ದೇವಿಂದ್ರ ಬಿರಾದಾರ ಉಪಸ್ಥಿತರಿರಲಿದ್ದಾರೆ.
ಪ್ರಮುಖರಾದ ಶಂಗಲಿAಗ ಕಲಶೆಟ್ಟಿ, ಲಿಂಗನಗೌಡ ಪಾಟೀಲ್, ಅನೀಲ ಪಾಟೀಲ್, ಸಿದ್ದಣ್ಣ ಸಜ್ಜನ್, ಚಂದ್ರಶೇಖರ ಪಾಟೀಲ್, ದೇವಿಂದ್ರ ಬಿರಾದಾರ, ಸುರೇಶ ಪಾಟೀಲ್, ಸಿದ್ದಣಗೌಡ ಪಾಟೀಲ್ ಇತರರಿದ್ದರು.