ಜಿಲ್ಲೆ

ಗಾಣಗಾಪುರಕ್ಕೆ ಭೇಟಿ ಶ್ರೀ

ಕಲಬುರಗಿ: ದೇವಲಗಾಣಗಾಪುರ ಸಮಗ್ರ ಅಭಿವೃದ್ಧಿಯಾಗಬೇಕು ಹಾಗೂ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು ಎಂಬ ಬೇಡಿಕೆ ಇದೆ. ಮುಂದಿನ ತಿಂಗಳು ಅಧಿಕಾರಿಗಳೊಂದಿಗೆ ದೇವಲಗಾಣಾಗಾಪುರಕ್ಕೆ ಭೇಟಿ ನೀಡಿ ಅಭಿವೃದ್ಧಿ ನೀಲಿನಕ್ಷೆ ರೂಪಿಸಲಾಗುವುದು. ಚಾಮುಂಡಿ, ಹುಲಿಗೆಮ್ಮ, ಸವದತ್ತಿ, ಘಾಟಿ ಸುಬ್ರಹ್ಮಣ್ಯಂ ದೇವಾಲಯ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದೆ. ದೇವಲಗಾಣಗಾಪುರ, ಕುಕ್ಕೆ ಸುಬ್ರಹ್ಮಣ್ಯಂ ಸೇರಿ ಇತರ ಕ್ಷೇತ್ರಗಳ ಪ್ರಾಧಿಕಾರ ರಚನೆಗೆ ಮನವಿ ಹಾಗೂ ಒತ್ತಡ ಬರುತ್ತಿದೆ ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಆಂಧ್ರಪ್ರದೇಶದ ಶ್ರೀಶೈಲಂ ಕ್ಷೇತ್ರದಲ್ಲಿನ ರ‍್ನಾಟಕ ಭವನದ ನಿಮರ‍್ಣ ಕರ‍್ಯ ಚಾಲ್ತಿಗೆ ನೀಡುವ ನಿಟ್ಟಿನಲ್ಲಿ ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ ಆಂಧ್ರದ ಡಿಸಿಎಂ ಜತೆ ಮಾತನಾಡಿದ್ದಾರೆ. ಒಪ್ಪಂದದ ವಿಷಯ ಎರಡೂ ರಾಜ್ಯಗಳ ನಡುವೆ ಅಂತಿಮವಾಗಬೇಕಿದೆ ಎಂದು ಹೇಳಿದರು.