ಚಿತ್ರದುರ್ಗ: ಜೀವನದಲ್ಲಿ ಉತ್ತಮ ತತ್ವಗಳನ್ನು ಅಳವಡಿಸಿಕೊಂಡು,ನಮ್ಮಲ್ಲಿರುವ ಅಂತಃ ಶಕ್ತಿಯನ್ನು ಜಾಗೃತಿಗೊಳಿಸಿಕೊಂಡರೆ ನಾವು ಜಗತ್ತಿಗೆ ಮಾದರಿಯಾ ಗಿ ಬದುಕಬಹುದು,ಇದಕ್ಕೆ ಮಹಾತ್ಮಾ ಗಾಂಧೀಜಿ ಉತ್ತಮ ನಿದರ್ಶನವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಹೇಳಿದರು. ಜಿಲ್ಲಾಡಳಿತ,ಜಿಪಂ ಹಾಗೂ ವಾರ್ತಾ ಇಲಾಖೆ ಸಹಯೋಗದಲ್ಲಿ ಸೋಮವಾರ ಡಿಸಿ ಕಚೇರಿಯಲ್ಲಿ ಏರ್ಪಡಿಸಿದ್ದ ಮಹಾತ್ಮಗಾಂಧೀಜಿ ಅವರ 154ನೇ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್‌ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು,ನಮ್ಮ ಭೌತಿಕ ಲಕ್ಷ ಣಗಳನ್ನು ಆಧರಿಸಿ ಜಗತ್ತು ನಮ್ಮನ್ನು ಗೌರವಿಸುತ್ತದೆ ಎಂಬುದು ಸುಳ್ಳು. ತುಂಡುಬಟ್ಟೆ ತೊಟ್ಟು,ಊರುಗೋಲಿನೊಂದಿಗೆ ದೇಶ ಸುತ್ತಿದ ಗಾಂಧಿ ತಮ್ಮ ತತ್ವ ಹಾಗೂ ಆಲೋಚನೆಗಳಿಂದ ಬ್ರಿಟಿಷರ ವಿರುದ್ಧ ಭಾರತೀಯರನ್ನು ಒಗ್ಗೂಡಿಸಿದರು.
ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ತಮ್ಮ ದೈಹಿಕ ಎತ್ತರದ ಬಗ್ಗೆ ಕೀಳರಿಮೆ ಹೊಂದದೆ,ಪ್ರಧಾನಿಯಾಗಿ ಸಂಕಷ್ಟ ಸಮಯದಲ್ಲಿ ದೇಶವನ್ನು ಮುನ್ನಡೆಸಿದರು. ಶಾಸ್ತ್ರಿ ಅವರ ಧೈರ್ಯ,ದೇಶಪ್ರೇಮ,ಪ್ರಾಮಾಣಿಕತೆಯನ್ನು ದೇಶ ಕೊಂಡಾಡುತ್ತದೆ. ಈ ಮಹನೀಯರು,ಅವರೊಳಗಿನ ಅಂತಃಶಕ್ತಿ ಯ ಪ್ರತೀಕವಾಗಿದ್ದಾರೆ. ಅಂತಃಶಕ್ತಿ ಕೊರತೆ ಕಾಡಿದಾಗ ಒಳ್ಳೆ ಬಟ್ಟೆ,ಆಭರಣ ಅಥವಾ ಅಲಂಕಾರದಿಂದ ಗೌರವ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೇ ವೆ.
ಅನೇಕರು ಉಪದೇಶಗಳಿಗೆ ಸೀಮಿತರಾಗಿತ್ತಾರೆ. ಆದರೆ ಅವುಗಳನ್ನು ಅವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದಿಲ್ಲ. ಆದರೆ ಗಾಂ ಧೀಜಿ,ತಾವು ಬೋಧಿಸಿದ ಸತ್ಯ,ಅಹಿಂಸೆ,ಸರ್ವಧರ್ಮ ಸಮನ್ವಯತೆ ಮೊದಲಾದ ತತ್ವಗಳನ್ನು ಚಾಚು ತಪ್ಪದೇ ಪಾಲಿಸಿದರು.ಗಾಂಧೀಜಿ ಸರ್ವಧರ್ಮಗಳ ಸಾರ ಒಂದೇ ಎಂದಿದ್ದ ಅವರನ್ನು ದೇಶ ರಾಷ್ಟ್ರಪಿತ ಎಂದು ಕರೆಯಿತು. ಮಹನೀಯರ ಸರಳ ಜೀವನ,ತತ್ವಾದರ್ಶಗಳನ್ನು ಇವತ್ತಿನ ಪೀಳಿಗೆ ಅರಿತು,ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ,ಗಾಂಧೀಜಿ ಅವರ ಜೀವನವೇ ಜಗತ್ತಿಗೆ ಒಂದು ಸಂದೇಶವಾಗಿದೆ. ಪ್ರಾಮಾಣಿಕವಾಗಿ ದೇಶವನ್ನು ಮುನ್ನೆಡೆಸಿದ ಕೀರ್ತಿಲಾಲ್‌ಬಹದ್ದೂರ್ ಶಾಸ್ತ್ರೀ ಅವರಿಗೆ ಸಲ್ಲುತ್ತದೆ. ಮಹನೀಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆದು ಉತ್ತಮ ಸಮಾಜವನ್ನು ನಿರ್ಮಿಸೋಣ ಎಂದರು.
ಜಿಲ್ಲಾವಾರ್ತಾಧಿಕಾರಿ ಬಿ.ವಿ.ತುಕಾರಾಂರಾವ್ ಮಾತನಾಡಿ,ಗಾಂಧೀಜಿ ಅವರ ಜೀವನ ಆದರ್ಶಗಳನ್ನು ಯುವಜನರಿಗೆ ಪರಿಚಯಿಸಲು ಬಾ ಪೂಜಿ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು ಎಂದರು. ಚಿತ್ರದುರ್ಗ ಸಂತಜೋಸೆಫ್‌ಕಾನ್ವೆಂಟ್ ಶಾಲೆ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆ ಮಾಡಿದರು. ಮೀನಾಕ್ಷಿಭಟ್,ಆರ್.ಎಂ.ಅಮೃತಾ,ತೇಜಸ್ವಿನಿ ಸಂಗಡಿಗರು ಗೀತಗಾಯನ ನಡೆಸಿಕೊಟ್ಟರು.
ಪ್ರೌಢಶಾಲೆ,ಪಪೂ,ಪದವಿ,ಸ್ನಾತಕೋತ್ತರ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆವಿಜೇತರಿಗೆ ವಿದ್ಯಾ ರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿ ಗೌರವಿಸಲಾಯಿತು.
ಎಸಿ ಎಂ.ಕಾರ್ತೀಕ್,ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್,ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್,ಕೈಗಾರಿಕೆ ಇಲಾಖೆ ಜಂಟಿನಿರ್ದೇಶಕ ಬಿ.ಆನಂದ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್.ಬಣಕಾರ್,ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ.ವೈಶಾಲಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ,ರಂಗನಿರ್ದೇಶಕ ಕೆಪಿಎಂ ಗಣೇ ಶಯ್ಯ ಮತ್ತಿತರರು ಇದ್ದರು.