ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜಕೀಯ, ಆಧ್ಯಾತ್ಮ, ಆರೋಗ್ಯ, ಸಾಹಿತ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ಜೀವಿತುದ್ದಕ್ಕೂ ಸಕ್ರಿಯರಾಗಿದ್ದ ಗಾಂಧೀಜಿ ಅವರ ಸರಳ ಜೀವನ ಇಂದಿಗೂ ಪ್ರಸ್ತುತ ಎಂದು ಚಿಂತಕ ಡಾ. ಸಂಜೀವ ಕುಲಕರ್ಣಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹುತಾತ್ಮ ಮೈಲಾರ ಮಹಾದೇವಪ್ಪನವರ ಟ್ರಸ್ಟ್, ಕರ್ನಾಟಕ ವಿದ್ಯಾವರ್ಧಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ಗಾಂಧಿ ಚಿಂತನೆಗಳ ಕಮ್ಮಟವನ್ನು ಯುವ ಜನಾಂಗಕ್ಕಾಗಿ ಏರ್ಪಡಿಸಬೇಕು. ಗಾಂಧಿ ಒಂದು ಜೀವನ ಕ್ರಿಯೆ ಎಂದರು.
ನಿಂಗಣ್ಣ ಕುಂಟಿ, ಡಾ. ಪ್ರಕಾಶ ಭಟ್ ಮಾತನಾಡಿದರು. ಹಾವೇರಿ ಕಲಾ ಬಳಗದವ ಬಸವರಾಜ ಶಿಗ್ಗಾಂವಿ, ಬಸವರಾಜ ಕರಡಿ, ಈರಣ್ಣ ಬೆಳವಡಿ, ಶಂಕರ ತುಮ್ಮಣ್ಣವರ, ಶಂಕರ ಬಡಿಗೇರ ದೇಶಭಕ್ತಿ ಗೀತೆ ಪ್ರಸ್ತುತಪಡಿಸಿದರು.
ಬಸವಪ್ರಭು ಹೊಸಕೇರಿ, ವೀರಣ್ಣ ಒಡ್ಡೀನ, ಡಾ. ಮಹೇಶ ಹೊರಕೇರಿ, ಡಾ. ಶಿವಾನಂದ ಶೆಟ್ಟರ, ಎಂ.ಎಂ. ಚಿಕ್ಕಮಠ, ಕೆ.ಎಚ್. ನಾಯಕ, ಬಿ.ಎಸ್. ಶಿರೋಳ, ಪ್ರಮೀಳಾ ಜಕ್ಕಣ್ಣವರ, ಚಂದ್ರಶೇಖರ ಅಮೀನಗಡ, ಮಹಾಂತೇಶ ನರೇಗಲ್, ಇತರರು ಇದ್ದರು.
ವಿ.ಎನ್. ತಿಪ್ಪನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್. ಹಿರೇಮಠ ನಿರೂಪಿಸಿದರು. ಸಿದ್ದಲಿಂಗೇಶ ರಂಗಣ್ಣವರ ವಂದಿಸಿದರು.