ಚಿಕ್ಕಮಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದಿಂದ ಗಾಂಧೀಜಿ ಪುಣ್ಯ ಸ್ಮರಣೆ ಆಯೋಜಿಸಲಾಗಿತ್ತು. ಭರತೇಶ್, ಬಲರಾಮ್, ಸಿ.ಸಿ.ಮಧು, ಆದಿತ್ಯ, ಐ.ಪಿ.ವೆಂಕಟೇಶ್ ಮತ್ತಿತರರಿದ್ದರು. 
ಜಿಲ್ಲೆ

ಗಾಂಧೀಜಿ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು

ಚಿಕ್ಕಮಗಳೂರು: ರಾಷ್ಟçಪಿತ ಮಹಾತ್ಮಗಾಂಧಿ ಅವರ ಆದರ್ಶ, ಮೌಲ್ಯಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ಭರತೇಶ್ ತಿಳಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದಿಂದ ಆಯೋಜಿಸಿದ್ದ ಗಾಂಧೀಜಿ ಪುಣ್ಯ ಸ್ಮರಣೆಯಲ್ಲಿ ಮಾತನಾಡಿದ ಅವರು, ಸತ್ಯ, ಶಾಂತಿ ಹಾಗೂ ಅಹಿಂಸೆಯ ಮೂಲಕ ಪರಿವರ್ತನೆಯ ಮಾರ್ಗವನ್ನು ತೋರಿಸಿದ ಗಾಂಧೀಜಿ ಅವರ ದಾರಿಯಲ್ಲಿ ಸಾಗೋಣ ಎಂದರು.

ಭಾರತದ ಸ್ವಾತಂತ್ರö್ಯಕ್ಕಾಗಿ ಹಲವಾರು ಮಹನೀಯರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರ ತ್ಯಾಗ ಮತ್ತು ಬಲಿದಾನದಿಂದ ದೇಶಕ್ಕೆ ಸ್ವಾತಂತ್ರö್ಯ ಬಂದಿದ್ದು, ಅಂತವರನ್ನು ಎಲ್ಲರೂ ಪ್ರತಿನಿತ್ಯ ನೆನಪಿಸುವಂತಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಿಸಾನ್ ಘಟಕದ ಉಪಾಧ್ಯಕ್ಷ ಬಲರಾಮ್, ಚಿಕ್ಕಮಗಳೂರು ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷ ಸಿ.ಸಿ.ಮಧು, ಕಾಂಗ್ರೆಸ್ ಮುಖಂಡ ಆದಿತ್ಯ, ಆವತಿ ಹೋಬಳಿ ಕಾರ್ಯದರ್ಶಿ ಐ.ಪಿ.ಶ್ರೀನಾಥ್, ಯುವ ಕಾಂಗ್ರೆಸ್ ಮುಖಂಡ ಲೋಕೇಶ್, ಹೋಬಳಿ ಅಧ್ಯಕ್ಷ ನಾಗೇಶ್, ಮುಖಂಡರಾದ ಜಿ.ಸಿ.ಬಸವರಾಜ್, ರಚನ್, ಜಗದೀಶ್ ಹಳೆಲಕ್ಯಾ, ನವೀನ್, ಸಿದ್ಧಾಂತ್, ಚಂದ್ರೇಗೌಡ, ಈಶೇಗೌಡ, ರಾಜೇಶ್ ಕುರುವಂಗಿ ಮತ್ತಿತರರಿದ್ದರು.