ಜಿಲ್ಲೆ

ಗಾಂಧೀಜಿ ಅದ್ದೂರಿ ಜಯಂತಿಗೆ ನಿರ್ಧಾರ

ಕಲಬುರಗಿ: ಜಿಲ್ಲಾಡಳಿತದಿಂದ ಅ.2ರಂದು ಮಹಾತ್ಮ ಗಾಂಧೀಜಿ ಜಯಂತಿ ಅದ್ದೂರಿಯಾಗಿ ಆಚರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ಜಿಲ್ಲಾಡಳಿತ, ಜಿಪಂ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಭಾರತ ಸೇವಾದಳ ಆಶ್ರಯದಲ್ಲಿ ಜರುಗಿಸಲಾಗುವುದು ಎಂದು ತಿಳಿಸಿದರು.
ಅ.೨ರಂದು ಬೆಳಗ್ಗೆ ೯ಕ್ಕೆ ಟೌನ್ ಹಾಲ್‌ನಲ್ಲಿರುವ ಗಾಂಧೀಜಿ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ ಮಾಡಿ, ಡಾ.ಎಸ್.ಪಂಡಿತ ರಂಗಮAದಿರದಲ್ಲಿ ೯.೧೫ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಸಮಾಜ ಕಲ್ಯಾಣ ಇಲಾಖೆ ಅಪರ ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ, ಶಾಲಾಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ವಿದ್ಯಾರ್ಥಿಗಳನ್ನು ಕರೆ ತರುವ ವ್ಯವಸ್ಥೆ ಮಾಡಲು ಸೂಚಿಸಿದರು.
ಸರ್ವಧರ್ಮ ಪ್ರಾರ್ಥನೆ ಇರುವುದರಿಂದ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್, ಜೈನ್ ಧರ್ಮದ ಗುರುಗಳನ್ನು ಆಹ್ವಾನಿಸಬೇಕು. ಗಾಂಧೀಜಿ ತತ್ವ ಸಂದೇಶ ಕುರಿತು ಉಪನ್ಯಾಸ ನೀಡಲು ವಿಷಯ ತಜ್ಞರ ಹೆಸರು ಅಂತಿಮಗೊಳಿಸಲಾಯಿತು. ವಿದ್ಯಾರ್ಥಿಗಳಿಂದ ಚರಕ ನೂಲುವ ಪ್ರಾತ್ಯಕ್ಷಿಕೆ, ಸರ್ವಧರ್ಮ ಪ್ರಾರ್ಥನೆ, ಸಂಗೀತ ಕಲಾವಿದರಿಂದ ಗಾಂಧಿ ಪ್ರೀಯ ಮತ್ತು ಸದ್ಭಾವನೆ ಗೀತೆ ಗಾಯನ, ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ನಗÀದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಎಲ್ಲ ಸರ್ಕಾರಿ -ಅರೇ ಸರ್ಕಾರಿ ಶಾಲಾ ಕಾಲೇಜು ಆವರಣಗಳಲ್ಲಿ ಗಾಂಧಿ ಜಯಂತಿ ನಿಮಿತ್ತ ಅ.೧ ರಂದು ಬೆಳಗ್ಗೆ ೭ಕ್ಕೆ ಸ್ವಚ್ಫತೆ ಶ್ರಮದಾನ ಹಮ್ಮಿಕೊಳ್ಳಬೇಕು ಎಂದರು.
ಎಸಿಪಿ ಸಂತೋಷ ಬನ್ನಹಟ್ಟಿ, ಜಿಪಂ ಯೋಜನಾ ನಿರ್ದೇಶಕ ಜಗದೇವ ಬಿ., ಪಾಲಿಕೆ ಅಭಿಯಂತರ ಪುರುಷೋತ್ತಮ, ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪ ನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೂರ್ಯಕಾಂತ ಮದಾನೆ, ಲಕ್ಷಿö್ಮÃಕಾಂತ, ಚಂದ್ರಶೇಖರ ಜಮಾದಾರ, ಡಿ.ಕೆ.ರಾಜರತ್ನ, ರವಿ ಮಿರಸ್ಕರ್ ಇತರರಿದ್ದರು.