ಬೀದರ್: ಇಲ್ಲಿನ ಗಾಂಧಿಗಂಜ್ ಸಹಕಾರ ಬ್ಯಾಂಕ್‌ಗೆ 2019-20ನೇ ಸಾಲಿನಲ್ಲಿ 92.29 ಲಕ್ಷ ರೂ. ನಿವ್ವಳ ಲಾಭ ಆಗಿದೆ ಎಂದು ಬ್ಯಾಂಕ್ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ ಹೇಳಿದ್ದಾರೆ.
ಬ್ಯಾಂಕಿನ 46ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸದ್ಯ 4 ಶಾಖೆಗಳಿದ್ದು, ಇನ್ನು 10 ಶಾಖೆ ತೆರೆಯಲು ಆರ್ಬಿಐಗೆ ಪ್ರಸ್ತಾವನೆ ಕಳಿಸಲಾಗುತ್ತಿದೆ ಎಂದರು.
ಬ್ಯಾಂಕು 14,810.35 ಲಕ್ಷ ರೂ. ಠೇವಣಿ ಹೊಂದಿದೆ. ಬ್ಯಾಂಕಿನ ನೆಲ ಮಹಡಿಯಲ್ಲಿ ಕೇಂದ್ರ ಕಚೇರಿ ಶಾಖೆ ಸ್ಥಳಾಂತರಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಎಟಿಎಂ, ಇ-ಸ್ಟ್ಯಾಂಪಿಂಗ್ ಮತ್ತು ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುವುದು ಎಂದರು.
ಉಪಾಧ್ಯಕ್ಷ ಕಮಲಕಿಶೋರ ಅಟ್ಟಲ್, ನಿರ್ದೇಶಕರಾದ ಅಶೋಕಕುಮಾರ ಲಾಚೂರಿಯಾ, ದತ್ತಾತ್ರಿ ಸಿಂದೋಲ್, ಕಾಶಿನಾಥ ಶೆಟಕಾರ, ಸೂರ್ಯಕಾಂತ ಶೆಟಕಾರ, ಅಂತೇಶ್ವರ ಶೆಟಕಾರ, ಸುನೀಲಕುಮಾರ ಬಿರಾದಾರ, ಜಯಕುಮಾರ ಕಾಂಗೆ, ಮಡಿವಾಳಪ್ಪ ಗಂಗಶೆಟ್ಟಿ, ಭರತ ಶೆಟಕಾರ, ಅಮರನಾಥ ಫುಲೇಕರ, ಶಾಂತಾ ಜೈರಾಜ ಖಂಡ್ರೆ, ಜ್ಯೋತಿ ಗೌರಶೆಟ್ಟಿ, ಮಲ್ಲಿಕಾರ್ಜುನ ಕಾರಬಾರಿ, ಹಿರಿಯ ಸದಸ್ಯ ಶಿವಶರಣಪ್ಪ ವಾಲಿ, ಸಿಇಒ ವಿಶ್ವನಾಥ ಕೊಡಗೆ ಇದ್ದರು. ಶ್ರೀದೇವಿ ಜಗದಾಳೆ ನಿರೂಪಣೆ ಮಾಡಿದರು.