ಜಿಲ್ಲೆ

ಗಾಂಧಿ ಪ್ರತಿಮೆ ಎದುರು ಜಾಗೃತಿ ಸಭೆ ಅ.2ಕ್ಕೆ

ಕಲಬುರಗಿ: ಗಾಂಧಿ ಜಯಂತಿ ಅಂಗವಾಗಿ ಅ.೨ರಂದು ಬೆಳಗ್ಗೆ ೯ಕ್ಕೆ ಗಾಂಧೀಜಿ ವಿಚಾರ ವೇದಿಕೆಯಿಂದ ಮಹಾನಗರ ಪಾಲಿಕೆ ಆವರಣದ ಗಾಂಧಿ ಪ್ರತಿಮೆ ಎದುರು ಜಾಗೃತಿ ಸಭೆ ನಡೆಸಲಾಗುವುದು ಎಂದು ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟದ ನಿರ್ದೇಶಕ ಬಸವರಾಜ ಉಪ್ಪಿನ್ ಹೇಳಿದರು. ಪ್ರಸ್ತುತ ಧರ್ಮಗಳ ಮಧ್ಯೆ ವೈಷಮ್ಯ ಹೆಚ್ಚುತ್ತಿದೆ. ಜಾತಿ ಪದ್ಧತಿ ಅಸ್ತಿತ್ವದಲ್ಲಿದೆ. ದೇಶದ ಯುವಜನತೆ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಹೀಗಾಗಿ ಜಾಗೃತಿ ಸಭೆ ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕ ಎಂ.ವೈ.ಪಾಟೀಲ್, ಚಿಂತಕರಾದ ಆರ್.ಕೆ.ಹುಡಗಿ, ಮೀನಾಕ್ಷಿ ಬಾಳಿ, ಕೆ.ನೀಲಾ, ದತ್ತಾತ್ರೇಯ ಇಕ್ಕಳಕಿ, ರಮೇಶ ಲಂಡನಕರ್, ಹೋರಾಟಗಾರರಾದ ಲಕ್ಷö್ಮಣ ದಸ್ತಿ, ವಾಹಜï ಬಾಬಾ, ರಮೇಶ ಧುತ್ತರಗಿ ಸೇರಿ ಹಲವರು ಪಾಲ್ಗೊಳ್ಳುವರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಗುರುಲಿಂಗ ಜಂಗಮ ಪಾಟೀಲ್, ಶಾಂತೇಶ್ವರ ಪಾಟೀಲ್, ಸಿ.ಡಿ.ಪಾಟೀಲ್, ಸಂಜೀವಕುಮಾರ ಖೋಬ್ರೆ, ಸಿದ್ದುಗೌಡ ಪಾಟೀಲ್, ರಾಜಶೇಖರ ಪಾಟೀಲ್ ಹೆಬಳಿ, ಸಿದ್ದರಾಮ ದೇಸಾಯಿ, ಶರಣು ವಾರದ ಇತರರಿದ್ದರು.