ಜಿಲ್ಲೆ

ಗಾಂಧಿ ಗ್ರಾಮ ಪ್ರಶಸ್ತಿ ಜನತೆಗೆ ಸಿಕ್ಕ ಗೌರವ

ಕುಶಾಲನಗರ: ನಮ್ಮ ಪಂಚಾಯಿತಿಗೆ ನೀಡಿರುವ ಈ ಬಾರಿಯ ಗಾಂಧಿ ಗ್ರಾಮ ಪ್ರಶಸ್ತಿ ಗ್ರಾಮದ ಜನತೆಗೆ ಸಿಕ್ಕಿರುವ ಪ್ರಶಸ್ತಿ ಎಂದು ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಸಿ.ಎಂ.ಆಸಿಫ್ ಅಭಿಪ್ರಾಯಪಟ್ಟರು.


ವಿನಾಯಕ ಬಡಾವಣೆಯ ಅಂಗನವಾಡಿಯಲ್ಲಿ ಬುಧವಾರ ಏರ್ಪಡಿಸಿದ್ದ ನಾಲ್ಕನೇ ವಾರ್ಡ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಗ್ರಾಮದ ಅಭಿವೃದ್ಧಿಗೆ ಪಂಚಾಯಿತಿ ಅನುದಾನ ಹಾಗೂ ಶಾಸಕರು ನಿಧಿಯಿಂದ ಸುಮಾರು 75 ಲಕ್ಷ ರೂ. ಅನುದಾನವನ್ನು ಗುಮ್ಮನಕೊಲ್ಲಿಯ ಎರಡು ವಾರ್ಡಿಗೆ ಶಾಸಕರು ನೀಡಿದ್ದಾರೆ ಎಂದು ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.


ಗ್ರಾಮಸ್ಥರು ಸ್ವಚ್ಛತೆ ಹಾಗೂ ಅಭಿವೃದ್ಧಿ ಕೆಲಸಗಳಿಗೆ ಸೂಕ್ತ ಸಲಹೆಗಳನ್ನು ನೀಡಿ. ಅದನ್ನು ಕಾರ್ಯರೂಪಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.


ವಾರ್ಡ್ ಸದಸ್ಯರಾದ ಮಣಿ, ಹರಿಣಿ ಪ್ರಭಾಕರ್, ಎಂ.ಆರ್.ಗಣೇಶ್, ಸಂಗೀತ, ಕುಮಾರಸ್ವಾಮಿ, ಕಾರ್ಯದರ್ಶಿ ಮಂಜುನಾಥ್, ಪಿಡಿಒ ಸುಮೇಶ್ ಇದ್ದರು.
5ನೇ ವಾರ್ಡ್ ಸಭೆ: ಮುಳ್ಳುಸೋಗೆ ಗ್ರಾಮ ಪಂಚಾಯಿತಿಯ ಗುಮ್ಮನಕೊಲ್ಲಿ 5ನೇ ವಾರ್ಡ್ ಸಭೆ 5ನೇ ವಾರ್ಡ್ ಸದಸ್ಯೆ ಸಂಗೀತ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.