ಜಿಲ್ಲೆ

ಗಾಂಜಾ ಸೇವಿಸಿದ್ದ ಓರ್ವನ ಬಂಧನ

ಆನಂದಕುಮಾರ ಭಮ್ಮನ್ನವರ

ಗಾಂಜಾ ಸೇವಿಸಿದ್ದ ಓರ್ವನ ಬಂಧನ

ಬೆಳಗಾವಿ : ಮಾದಕ ವಸ್ತು ಸೇವಿಸಿದ್ದ ಓರ್ವನನ್ನು ಹಿರೇಬಾಗೇವಾಡಿ ಪೊಲೀಸರ ಮಂಗಳವಾರ ಬಂಧಿಸಿದ್ದಾರೆ.

ತಾರಿಹಾಳ ಗ್ರಾಮದ ನಿವಾಸಿ ಸೋಮನಾಥ ರಮೇಶ ಕಲ್ಲನ್ನವರ(24) ಬಂಧಿತ ಆರೋಪಿ.ಈತ ಮಾದಕ ಗಾಂಜಾ ಸೇವಿಸಿ ವಿಚಿತ್ರವಾಗಿ ವರ್ತಿಸುತ್ತಿದ್ದಾಗ ಬಂಧಿಸಿ ವಿಚಾರಣೆ ನಡೆಸಿದಾಗ ಗಾಂಜಾ ಸೇವಿಸಿರುವುದಾಗಿ ತಿಳಿದು ಬಂದಿದೆ.

ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.